ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಿಂಡಾಲ್ಕೊ ಇಂಡಸ್ಟ್ರೀಸ್‌ಗೆ 664ಕೋಟಿ ರೂ ನಿವ್ವಳ ಲಾಭ (Hindalco Industries|Q4 profit)
Bookmark and Share Feedback Print
 
ದೇಶದ ಪ್ರಮುಖ ಕಂಪೆನಿಗಳಲ್ಲಿ ಸ್ಥಾನಪಡೆದಿರುವ ಹಿಂಡಾಲ್ಕೊ ಇಂಡಸ್ಟ್ರೀಸ್, ಮಾರ್ಚ್2010ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ದ್ವಿಗುಣವಾಗಿ 664 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 269 ಕೋಟಿ ರೂಪಾಯಿ ನಿವ್ವಳ ಲಾಭವಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸಾಮರ್ಥ್ಯ ಹೆಚ್ಚಳದಿಂದ ಉಳಿತಾಯ ಹಾಗೂ ಉತ್ಪಾದಕ ವಸ್ತುಗಳ ದರಗಳ ಏರಿಕೆಯಿಂದಾಗಿ,ನಿವ್ವಳ ಲಾಭದಲ್ಲಿ ದ್ವಿಗುಣವಾಗಿದೆ. ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಶೇ.43 ರಷ್ಟು ಏರಿಕೆಯಾಗಿ 5,404 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ಅವಧಿಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತವಾಗಿತ್ತು ಮತ್ತು ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು.ಆದರೆ ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ನಿವ್ವಳ ಲಾಭದಲ್ಲಿ ದ್ವಿಗುಣವಾಗಿದೆ ಎಂದು ಹಿಂಡಾಲ್ಕೊ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಿ.ಭಟ್ಟಾಚಾರ್ಯ ತಿಳಿಸಿದ್ದಾರೆ.

ಕಾಪರ್ ವಿಭಾಗದ ನಿವ್ವಳ ಆದಾಯದಲ್ಲಿ ಶೇ.52ರಷ್ಟು ಏರಿಕೆಯಾಗಿ 3,361 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ 2,213 ಕೋಟಿ ರೂಪಾಯಿ ಲಾಭವಾಗಿತ್ತು ಎಂದು ಹಿಂಡಾಲ್ಕೊ ಕಂಪೆನಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ