ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2-3 ವರ್ಷಗಳಲ್ಲಿ ಚಿನ್ನದ ದರದಲ್ಲಿ ಗರಿಷ್ಠ ಏರಿಕೆ ಸಾಧ್ಯತೆ (Gold price | International | Rajesh Exports Limited)
Bookmark and Share Feedback Print
 
ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 2000 ಡಾಲರ್‌ಗಳವರೆಗೆ ತಲುಪುವ ನಿರೀಕ್ಷೆಯಿದೆ ಎಂದು ವಹಿವಾಟಿನ ತಜ್ಞರು ಹೇಳಿದ್ದಾರೆ.

20 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೊರ್ಟ್ಸ್‌ ಲಿಮಿಟೆಡ್ ಮುಖ್ಯಸ್ಥರಾದ ರಾಜೇಶ್ ಮೆಹತಾ ಮಾತನಾಡಿ ಮುಂಬರುವ ಎರಡು ಅಥವಾ ಮೂರು ವರ್ಷಗಳ ಅವಧಿಯಲ್ಲಿ ಚಿನ್ನದ ದರಗಳು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಆದರೆ, ಚಿನ್ನದ ದರ ಏರಿಕೆ ಕುರಿತಂತೆ ಖಚಿತವಾಗಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಆದರೆ ಚಿನ್ನದ ದರದಲ್ಲಿ ಪ್ರತಿ ಔನ್ಸ್‌ಗೆ 1500-2000 ಡಾಲರ್‌ಗಳವರೆಗೆ ಗರಿಷ್ಠ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಮೆಹತಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ