ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರ ಶೀಘ್ರದಲ್ಲಿ ಇಳಿಮುಖ: ಮುಖರ್ಜಿ (Inflation | Pranab Mukherjee | Retail price | IMF)
Bookmark and Share Feedback Print
 
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಮೀಕ್ಷೆಯಂತೆ ಚಿಲ್ಲರೆ ವಹಿವಾಟಿನ ಹಣದುಬ್ಬರ ದರ ಮುಂಬರುವ ತಿಂಗಳುಗಳಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಗತ್ಯ ವಸ್ತುಗಳ ದರಗಳು ನಿಧಾನವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ಅಥವಾ ಮೂರು ತಿಂಗಳುಗಳ ಅವಧಿಯಲ್ಲಿ ಹಣದುಬ್ಬರ ಕೂಡಾ ಇಳಿಕೆಯಾಗುವ ಸಾಧ್ಯತೆಗಳಿವೆ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಸಭೆಯಲ್ಲಿ ಸಚಿವ ಮುಖರ್ಜಿ ತಿಳಿಸಿದ್ದಾರೆ.

ದರ ಏರಿಕೆ ನಿಯಂತ್ರಣಕ್ಕಾಗಿ ಸರಕಾರ ಅಗತ್ಯ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಹಣದುಬ್ಬರ ಏರಿಕೆಯಿಂದಾಗಿ ದೇಶದ ಬಡಜನತೆ ತುಂಬಾ ತೊಂದರೆ ಎದುರಿಸುತ್ತಿದೆ.ಹಣದುಬ್ಬರವನ್ನು ಆದಷ್ಟು ಶೀಘ್ರದಲ್ಲಿ ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಸಚಿವ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.8.8ಕ್ಕೆ ತಲುಪುವ ನಿರೀಕ್ಷೆಯಿದೆ.2011ರಲ್ಲಿ ಜಿಡಿಪಿ ದರ ಶೇ.8.4ರಷ್ಟಾಗಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗಪಡಿಸಿರುವುದಾಗಿ ಸಚಿವ ಮುಖರ್ಜಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ