ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತ್ಯಂ ಕಂಪ್ಯೂಟರ್‌ಗೆ 40 ಮಿಲಿಯನ್ ಡಾಲರ್ ಗುತ್ತಿಗೆ (Satyam Computer Services | Japan | Nissan Motor Co Ltd)
Bookmark and Share Feedback Print
 
ಮಹೀಂದ್ರಾ ಆಂಡ್ ಮಹೀಂದ್ರಾ ಸಂಚಾಲಿತ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್, ಜಪಾನ್‌ನ ನಿಸಾನ್ ಕಂಪೆನಿಯಿಂದ ಐದು ವರ್ಷಗಳ ಅವಧಿಯ 40 ಮಿಲಿಯನ್ ಡಾಲರ್ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು ಎಸಗಿದ ಬಹುಕೋಟಿ ಹಗರಣದ ವಂಚನೆಯಿಂದಾಗಿ, ಕಂಪೆನಿ ಭಾರಿ ತೊಂದರೆಗೆ ಸಿಲುಕಿತ್ತು.

ಜಪಾನ್‌ನ ನಿಸಾರ್ ಮೋಟಾರ್ ಕಂಪೆನಿ ಲಿಮಿಟೆಡ್ ಪ್ರಕಟಣೆಯೊಂದನ್ನು ಹೊರಡಿಸಿ, ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನೊಂದಿಗೆ ನೂತನ ತಂತ್ರಜ್ಞಾನದ ಹೊರಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಸತ್ಯಂನೊಂದಿಗೆ ಮುಂಬರುವ 2013ರವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಎರಡು ವರ್ಷಗಳ ಅವಧಿಗೆ ವಿಸ್ತರಿಸಬಹುದಾಗಿದೆ ಎಂದು ನಿಸಾನ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಜಪಾನ್ ಮೂಲದ ನಿಸಾನ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡ ವಿಷಯ ಬಹಿರಂಗವಾಗುತ್ತಿದ್ದಂತೆ, ಶೇರುಮಾರುಕಟ್ಟೆಯಲ್ಲಿ ಸತ್ಯಂ ಶೇರುಗಳ ದರಗಳು ಭಾರಿ ಏರಿಕೆ ಕಂಡಿವೆ.

ಹೈದ್ರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ ಸಂಸ್ಥೆಯನ್ನು ವಾಹನ ತಯಾರಿಕೆ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ ಆಧೀನದ ಟೆಕ್ ಮಹೀಂದ್ರಾ ಲಿಮಿಟೆಡ್ ಕಂಪೆನಿ ಹರಾಜಿನಲ್ಲಿ ಖರೀದಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ