ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಬುಧಾಬಿಯಲ್ಲಿ ಚಿನ್ನದ ನಾಣ್ಯಗಳನ್ನು ನೀಡುವ ಎಟಿಎಂ (Gulf glitz | Abu Dhabi | ATM | Gold)
Bookmark and Share Feedback Print
 
ನಗರದ ಪ್ರತಿಷ್ಠಿತ ಹೋಟೆಲ್ ಗಲ್ಫ್‌ ಗ್ಲಿಟ್ಜ್, ಗ್ರಾಹಕರಿಗೆ ವಿಶೇಷವೆನಿಸುವ ಚಿನ್ನದ ನಾಣ್ಯಗಳನ್ನು ನೀಡುವ ಎಟಿಎಂ ಮಷಿನ್‌ ಅಳವಢಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ.

ಹೋಟೆಲ್‌ನ ಎಮಿರೇಟ್ಸ್ ಪ್ಯಾಲೇಸ್‌ ಆವರಣದಲ್ಲಿ ಎಟಿಎಂ ಮಷಿನ್ ಅಳವಡಿಸಲಾಗಿದ್ದು, ಪ್ರತಿನಿತ್ಯ ಚಿನ್ನದ ದರದ ವಿವರಣೆ ಹಾಗೂ 10 ಗ್ರಾಂಗಳವರೆಗೆ ಚಿನ್ನದ ನಾಣ್ಯಗಳನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜರ್ಮನ್ ಉದ್ಯಮಿ ಥಾಮಸ್ ಗೈಸ್ಲೆರ್ ಅವರಿಗೆ ಈ ಆಲೋಚನೆ ಹೊಳೆದಿದ್ದು, 2009ರಿಂದ ಚಿನ್ನದ ನಾಣ್ಯವನ್ನು ನೀಡುವ ಮಷಿನ್ ತಯಾರಿಕೆಗಾಗಿ ಹರಸಾಹಸ ಪಡುತ್ತಿದ್ದು. ಇದೀಗ ಯಶಸ್ವಿಯಾಗಿದ್ದಾರೆ.

ಥಾಮಸ್ ಗೈಸ್ಲೆರ್ ಮಾತನಾಡಿ, ಚಿನ್ನದ ಮಾರುಕಟ್ಟೆ ಬೃಹತ್ ಪ್ರಮಾಣದಲ್ಲಿರುವುದು ಹಾಗೂ ದೇಶದ ಗ್ರಾಹಕರು ಚಿನ್ನದ ಖರೀದಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದರಿಂದ ಅಬುಧಾಬಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಚಿನ್ನದ ದರ ದಾಖಲೆಯ ಗರಿಷ್ಠ ಏರಿಕೆ ಕಂಡು ಪ್ರತಿ ಔನ್ಸ್‌ಗೆ 1.245 ಡಾಲರ್‌ಗಳಿಗೆ ತಲುಪಿದ ಸಂದರ್ಭದಲ್ಲಿ, ಚಿನ್ನದ ನಾಣ್ಯ ನೀಡುವ ಎಟಿಎಂ ಮಷಿನ್ ಹೊರಬಂದಿರುವುದು, ಗ್ರಾಹಕರ ಖರೀದಿಗೆ ಅನುಕೂಲವಾಗಲಿದೆ ಎಂದು ಥಾಮಸ್ ಗೈಸ್ಲೆರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ