ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.44ಕ್ಕೆ ಏರಿಕೆ ಕಂಡ ಅಹಾರ ಹಣದುಬ್ಬರ ದರ (Food inflation | Reserve Bank | prices | Government | Fuel prices)
Bookmark and Share Feedback Print
 
ಕಳೆದ ಏಪ್ರಿಲ್ ತಿಂಗಳ ಅವಧಿಯಲ್ಲಿ ಅಲ್ಪ ಇಳಿಮುಖವಾಗಿದ್ದ ಆಹಾರ ಹಣದುಬ್ಬರ ದರ, ಮತ್ತೆ ಇದೀಗ ಏರಿಕೆ ಕಂಡು ದೇಶದ ಸಾಮಾನ್ಯ ವರ್ಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಅಗತ್ಯ ವಸ್ತುಗಳ ಹಾಗೂ ತರಕಾರಿ ದರಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರ ದರ ಶೇ.16.04ಕ್ಕೆ ತಲುಪಿತ್ತು. ಇದೀಗ ಮೇ 1ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.16.44ಕ್ಕೆ ಏರಿಕೆ ಕಂಡಿದೆ.

ಕಳೆದ ವಾರ ಶೇ.12.68ರಷ್ಟು ಏರಿಕೆ ಕಂಡಿದ್ದ ಇಂಧನ ಸೂಚ್ಯಂಕ ದರ ಶೇ.12.33ಕ್ಕೆ ಇಳಿಕೆಯಾಗಿದೆ. ಪ್ರಾಥಮಿಕ ವಸ್ತುಗಳ ಸೂಚ್ಯಂಕ ದರ ಕಳೆದ ವಾರಕ್ಕೆ ಹೋಲಿಸಿದಲ್ಲಿ ಶೇ.13.93 ರಿಂದ ಶೇ.16.76ಕ್ಕೆ ಏರಿಕೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್, ನಿರಂತರ ಆಹಾರ ಹಣದುಬ್ಬರ ಏರಿಕೆಯಿಂದಾಗಿ ಆರ್ಥಿಕ ನೀತಿಗಳಲ್ಲಿ ಕೆಲ ಬದಲಾವಣೆಗಳನ್ನು ತರಲು, ಮತ್ತಷ್ಟು ಕಾಯ್ದುನೋಡುವ ತಂತ್ರವನ್ನು ಅನುಸರಿಸುತ್ತದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಆಹಾರ ಸರಬರಾಜು ಕೊರತೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಕುಸಿತದಿಂದಾಗಿ, ಆಹಾರ ಹಣದುಬ್ಬರ ದರ ಮಾರ್ಚ್ ತಿಂಗಳಲ್ಲಿ ಶೇ.9.9ರಷ್ಟಿದ್ದು, ಪ್ರಸಕ್ತ ವಾರದಲ್ಲಿ 17 ತಿಂಗಳ ಗರಿಷ್ಠ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ