ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೋನಿ ಕಾರ್ಪೋರೇಶನ್‌ಗೆ 1.7 ಬಿನ್ ಡಾಲರ್ ನಿವ್ವಳ ಲಾಭ (Sony Corp | Operating profit | Japan | Bravia TV)
Bookmark and Share Feedback Print
 
ಜಪಾನ್‌ನ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆ ಸಂಸ್ಥೆ ಸೋನಿ ಕಾರ್ಪೋರೇಶನ್, ನಾಲ್ಕನೇ ತ್ರೈಮಾಸಿಕ ಅಂತ್ಯಕ್ಕೆ 1.7 ಬಿಲಿಯನ್ ಡಾಲರ್ ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಫ್ಲ್ಯಾಟ್ ಟಿವಿ ಹಾಗೂ 3ಡಿ ಸಾಮರ್ಥ್ಯದ ವಿಡಿಯೋ ಗೇಮ್ಸ್‌ಗಳ ಮಾರಾಟ ನಿರೀಕ್ಷೆಗಿಂತ ಅಲ್ಪ ಕಡಿಮೆಯಾಗಿದ್ದರಿಂದ ನಿವ್ವಳ ಲಾಭದಲ್ಲಿ ಅಲ್ಪಮಟ್ಟಿಗೆ ಇಳಿಕೆಯಾಗಿದೆ.ಮುಂಬರುವ 2011ರ ವೇಳೆಗೆ 160 ಬಿಲಿಯನ್ ಯೆನ್‌ಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಸಾಮ್‌ಸುಂಗ್‌ ಕಂಪೆನಿಯ ನಂತರ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಸೋನಿ ಕಾರ್ಪೋರೇಶನ್, ಪ್ರಸಕ್ತ ವರ್ಷದ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ.

ಸೋನಿ ಕಾರ್ಪೋರೇಶನ್ ನಾಲ್ಕನೇ ತ್ರೈಮಾಸಿಕ ಫಲಿತಾಂಶದಲ್ಲಿ ಶೇ.2.4ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಶೇರುದರಗಳಲ್ಲಿ ಶೇ.4.1ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ