ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಗರೇಟು ಅಬಕಾರಿ ಸುಂಕ ಹಿಂಪಡೆದ ಸರಕಾರ (Cigarettes| Excise duty | Exemption | Government)
Bookmark and Share Feedback Print
 
ಕೇಂದ್ರ ಸರಕಾರ ಸಣ್ಣ ಗಾತ್ರದ ಸಿಗರೇಟುಗಳ ಮೇಲಿನ ಅಬಕಾರಿ ಸುಂಕವನ್ನು ಹಿಂದಕ್ಕೆ ಪಡೆದಿರುವುದರಿಂದ,ದರಗಳಲ್ಲಿ ಇಳಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

60ಎಂಎಂ ಗಾತ್ರಕ್ಕಿಂತ ಕಡಿಮೆ ಉದ್ದದ ಸಿಗರೇಟುಗಳಿಗೆ, ಬಜೆಟ್‌ನಲ್ಲಿ ಹೇರಲಾಗಿದ್ದ ಪ್ರತಿ ಸಾವಿರಕ್ಕೆ 150 ರೂಪಾಯಿಗಳ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಗರೇಟು ಉತ್ಪಾದನೆಯಲ್ಲಿ ನೇರ ಬಂಡವಾಳ ಹೂಡಿಕೆ ನಿಷೇಧ ಮುಂದುವರಿಯಲಿದೆ ಎಂದು ಕಂದಾಯ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.ಅಕ್ಟೋಬರ್ 2008ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ.

ಏತನ್ಮದ್ಯೆ, ಕೇಂದ್ರ ಸರಕಾರ 1000ಕೆಡಬ್ಲೂಎಚ್‌ ವಿದ್ಯುತ್ ಅಮುದಿಗೆ ನಿಗದಿಪಡಿಸಲಾಗಿದ್ದ 2000 ರೂಪಾಯಿಗಳ ಅಬಕಾರಿ ತೆರಿಗೆಯನ್ನು ಕೂಡಾ ಹಿಂದಕ್ಕೆ ಪಡೆಯಲಾಗಿದೆ.ಅಬಕಾರಿ ತೆರಿಗೆ ಹಿಂಪಡೆಯಲು ಸರಕಾರದ ಮುಂದಿರುವ ಕಾರಣಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ