ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆ:ಅಸೋಚಾಮ್ (Gold price|Assocham|Gold Rs 15,000 per 10g)
Bookmark and Share Feedback Print
 
PTI
ಯುರೋಪ್ ಮಾರುಕಟ್ಟೆಯ ಚೇತರಿಕೆಯಿಂದಾಗಿ ಚಿನ್ನದ ದರ ಕೆಲ ದಿನಗಳಲ್ಲಿ ಪ್ರತಿ 10 ಗ್ರಾಂಗೆ 19,500 ರೂಪಾಯಿಗಳಿಗೆ ತಲುಪಿದ್ದು, ನಂತರ ಪ್ರತಿ 10ಗ್ರಾಗೆ 15,000 ರೂಪಾಯಿಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಪ್ರಕಟಿಸಿದೆ.

ಪ್ರಸ್ತುತ ಚಿನ್ನದ ದರ ಪ್ರತಿ 10ಗ್ರಾಂಗೆ 18,300 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಯುರೋಪ್‌ನಲ್ಲಿ ಶೇರುಪೇಟೆಗಳ ಏರಿಳಿಕೆಯ ತೊಳಲಾಟದಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ.ಆದ್ದರಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಅಸೋಚಾಮ್ ಅಧ್ಯಕ್ಷೆ ಸ್ವಾತಿ ಪಿರಾಮಲ್ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಅವಧಿಯಲ್ಲಿ, ಮುಂಬರುವ ದೀಪಾವಳಿಯ ವೇಳೆಗೆ ಚಿನ್ನದ ದರ ಪ್ರತಿ 10ಗ್ರಾಂಗೆ 15,000 ರೂಪಾಯಿಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಶೇರುಪೇಟೆಯ ಏರಿಳಿತದಿಂದ ಹೂಡಿಕೆದಾರರು ಆತಂಕಗೊಂಡಿರುವುದರಿಂದ, ಹೂಡಿಕೆದಾರರಿಗೆ ಪ್ರಸಕ್ತ ಸ್ಥಿತಿಯಲ್ಲಿ ಚಿನ್ನ ಖರೀದಿ ಪರ್ಯಾಯ ಹೂಡಿಕೆಯಾಗಿ ಪರಿಣಮಿಸಿದೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ