ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲಾರ್ಸನ್‌ಗೆ ಹೆದ್ದಾರಿ ನಿಗಮದಿಂದ 1,450 ಕೋಟಿ ರೂ.ಗುತ್ತಿಗೆ (Larsen & Toubro | NHAI | Road project | Krishnagiri | Walajahpet)
Bookmark and Share Feedback Print
 
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಇಂಜಿನಿಯರಿಂಗ್ ಸಂಸ್ಥೆಯಾದ ಲಾರ್ಸನ್ ಆಂಡ್ ಟೌಬ್ರೋ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ತಮಿಳುನಾಡಿನಲ್ಲಿ ರಸ್ತೆ ಯೋಜನೆಗಾಗಿ 1.450 ಕೋಟಿ ರೂಪಾಯಿ ಗುತ್ತಿಗೆ ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಎಲ್‌ಆಂಡ್ ಟಿ ಕಂಪೆನಿ ತಮಿಳುನಾಡಿನಲ್ಲಿರುವ ಕೃಷ್ಣಗಿರಿ-ವಲಜಾಪೇಟ್‌ ಮದ್ದೆ ಹೆದ್ದಾರಿ ನಿರ್ಮಾಣಕ್ಕಾಗಿ, ಹೆದ್ದಾರಿ ಅಭಿವೃದ್ಧಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ತಮಿಳುನಾಡಿನಲ್ಲಿರುವ ಕೃಷ್ಣಗಿರಿ-ವಲಜಾಪೇಟ್‌ ಮದ್ದೆ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸಲು 30 ತಿಂಗಳು ಅವಧಿಯ ಗಡುವನ್ನು ಪಡೆದಿದೆ.

ಮುಂಬೈ ಶೇರುಪೇಟೆಯಲ್ಲಿ ಎಲ್‌ ಆಂಡ್ ಟಿ ಕಂಪೆನಿಯ ಶೇರುಗಳು ಶೇರುದರದಲ್ಲಿ ಶೇ.0.35ರಷ್ಟು ಏರಿಕೆ ಕಂಡು, ತಲಾ ಶೇರುದರ 1,577 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ