ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐ ನಿವ್ವಳ ಲಾಭದಲ್ಲಿ ಶೇ.32ರಷ್ಟು ಕುಸಿತ (SBI | Q4 | Fourth quarter | Net profit | Bombay Stock Exchange | Dividend)
Bookmark and Share Feedback Print
 
ಸರಕಾರಿ ಸ್ವಾಮ್ಯದ ದೇಶದ ಅಗ್ರಬ್ಯಾಂಕ್‌ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ನಾಲ್ಕನೇ ತ್ರೈಮಾಸಿಕ ಅಂತ್ಯಕ್ಕೆ ನಿವ್ವಳ ಲಾಭದಲ್ಲಿ ಶೇ.32ರಷ್ಟು ಇಳಿಕೆಯಾಗಿ 1,866.60 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 2,742 ಕೋಟಿ ರೂಪಾಯಿ ನಿವ್ವಳ ಲಾಭವಾಗಿತ್ತು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಆದಾಯದಲ್ಲಿ ಶೇ.1.8ರಷ್ಟು ಏರಿಕೆಯಾಗಿ, 22,474.12 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 22,060.61 ಕೋಟಿ ರೂಪಾಯಿಗಳಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬ್ಯಾಂಕ್‌ನ ಬಡ್ಡಿ ಆದಾಯ 17,342.39 ಕೋಟಿ ರೂಪಾಯಿಗಳಿಂದ 17,965.59 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಎಸ್‌ಬಿಐನ ಅಡಳಿತ ಮಂಡಳಿ ಶೇರುದಾರರಿಗೆ ತಲಾ 10 ರೂಪಾಯಿ ಮುಖಬೆಲೆಯ ಶೇರಿಗೆ 30 ರೂಪಾಯಿ ಡೆವಿಡೆಂಡ್ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ