ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 'ಅಕ್ಷಯ ತದಿಗೆ' ನಿಮಿತ್ಯ ಚಿನ್ನಾಭರಣ ಖರೀದಿಗೆ ಸಿದ್ಧತೆ (Akshaya Tritiya | Jewellery shops | Nationalised banks | Gold coins)
Bookmark and Share Feedback Print
 
PTI
ನಾಳೆ ಅಕ್ಷಯ ತದಿಗೆ ದಿನವಾಗಿದ್ದರಿಂದ, ಗ್ರಾಹಕರ ಚಿನ್ನದ ಖರೀದಿ ಬೇಡಿಕೆಯನ್ನು ಪೂರೈಸಲು ಆಭರಣ ಮಳಿಗೆಗಳು ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳು ಸಜ್ಜುಗೊಂಡಿವೆ.

ಚಿನ್ನದ ಖರೀದಿಗೆ ಅಕ್ಷಯ ತದಿಗೆ ಹಬ್ಬ ವರ್ಷದ ಎರಡನೇ ಪ್ರಮುಖ ಹಬ್ಬವಾಗಿದೆ. ಅಕ್ಷಯ ತೃತಿಯ ದಿನದಂದು ಚಿನ್ನವನ್ನು ಖರೀದಿಸಿದಲ್ಲಿ ಸಮೃದ್ಧಿಯನ್ನು ನೀಡುತ್ತದೆ ಎಂದು ಹಿಂದೂಗಳ ಭಾವನೆಯಾಗಿದೆ. ಮತ್ತೊಂದು ಹಬ್ಬವೆಂದರೆ ದೀಪಾವಳಿಗೆ ಮುನ್ನ ಬರುವ ದಾಂತೆರಸ್.

ಸಾಂಪ್ರದಾಯಿಕವಾಗಿ, ಬಹುತೇಕ ಹಿಂದೂಗಳು ಅಕ್ಷಯ ತದಿಗೆ ದಿನದಂದು ಚಿನ್ನವನ್ನು ಖರೀದಿಸಲು ಅಥವಾ ಉಡುಗೊರೆಯಾಗಿ ಕೊಡುಗೆಯನ್ನು ನೀಡಲು ಬಯಸುತ್ತಾರೆ.

ಆಂಧ್ರಪ್ರದೇಶದಲ್ಲಿ ಬಹುತೇಕ ಚಿನ್ನಾಭರಣ ಅಂಗಡಿಗಳ ಮಾಲೀಕರು, ಗ್ರಾಹಕರನ್ನು ಸೆಳೆಯಲು ವಿಶಿಷ್ಟ ವಿನ್ಯಾಸಗಳನ್ನು ಹೊಂದಿರುವ ಚಿನ್ನಾಭರಣ ಸಂಗ್ರಹದಲ್ಲಿ ತೊಡಗಿದ್ದಾರೆ.

ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್‌ಗಳು, ಗ್ರಾಹಕರಿಗೆ ಚಿನ್ನದ ನಾಣ್ಯಗಳನ್ನು ನೀಡಲು ಸಿದ್ಧವಾಗಿವೆ. ರವಿವಾರ ರಜೆಯ ದಿನದ ಮಧ್ಯೆಯು ಗ್ರಾಹಕರಿಗೆ ಚಿನ್ನದ ನಾಣ್ಯಗಳನ್ನು ನೀಡಲು ಬ್ಯಾಂಕ್‌ಗಳು ತೆರೆದಿರುತ್ತವೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ