ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೇರ ತೆರಿಗೆ ಸಂಗ್ರಹದಲ್ಲಿ ಶೇ.11.8ರಷ್ಟು ಹೆಚ್ಚಳ (Direct tax collection | TDS | CBDT)
Bookmark and Share Feedback Print
 
ಕೇಂದ್ರ ಸರಕಾರದ ನೇರ ತೆರಿಗೆ ಸಂಗ್ರಹ 2009-10ರ ಸಾಲಿನಲ್ಲಿ 3,78,350 ಕೋಟಿ ರೂಪಾಯಿಗಳಿಗೆ ತಲುಪಿದೆ.ಕೇಂದ್ರ ಸರಕಾರ 3.8 ಲಕ್ಷ ಕೋಟಿ ರೂಪಾಯಿಗಳ ತೆರಿಗೆಯ ಗುರಿಯನ್ನು ನಿಗದಿಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ದೇಶದ ಕೈಗಾರಿಕೋದ್ಯಮ ಸಂಘಟನೆ ಅಸೋಚಾಮ್ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಆದಾಯ ಇಲಾಖೆಯ ಅಧಿಕಾರಿ ದುರ್ಗೇಶ್ ಶಂಕರ್ , 2008-09ರ ಅವಧಿಯಲ್ಲಿ 3,38,212 ಕೋಟಿ ರೂಪಾಯಿಗಳಿದ್ದ ನೇರ ತೆರಿಗೆ ಸಂಗ್ರಹ ಶೇ.11.8ರಷ್ಟು ಹೆಚ್ಚಳವಾಗಿ 2009-10ರ ಅವಧಿಯಲ್ಲಿ 3,78,350 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

2009-10ರ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದ್ದರಿಂದ, ಟಿಡಿಎಸ್ ಸಂಗ್ರಹದಲ್ಲಿ ಶೇ.36.91ರಷ್ಟು ಕುಸಿತವಾಗಿದೆ ಎಂದು ಹೇಳಿದ್ದಾರೆ.

ದೇಶದ ವಾರ್ಷಿಕ ಒಟ್ಟು ಟಿಡಿಎಸ್ ಸಂಗ್ರಹ 1,30,172 ಕೋಟಿ ರೂಪಾಯಿಗಳಿಂದ 1,39,529 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ