ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತೀಯ ಕೈಮಗ್ಗ ಉತ್ಪನ್ನ ನಿಷೇಧ ಹಿಂದಕ್ಕೆ:ಬಾಂಗ್ಲಾ (Bangladesh| Indian yarn|ban on Indian yarn|Benapole)
Bookmark and Share Feedback Print
 
ಭಾರತೀಯ ಕೈಮಗ್ಗ ಉತ್ಪನ್ನಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಬಾಂಗ್ಲಾದೇಶದ ಸರಕಾರ ಹಿಂದಕ್ಕೆ ಪಡೆದಿರುವುದರಿಂದ, ಜವಳಿ ಕಚ್ಚಾ ವಸ್ತುಗಳ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕಂದಾಯ ಮಂಡಳಿ, ಭಾರತೀಯ ಕೈಮಗ್ಗ ಉತ್ಪನ್ನಗಳ ಮೇಲೆ ಹೇರಿದ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಕೈಮಗ್ಗ ಉತ್ಪನ್ನಗಳನ್ನು, ಭೂಸಾಗಾಣೆ ಅಥವಾ ಬಂದರಿನ ಮೂಲಕ ದೇಶದೊಳಗೆ ಸಾಗಿಸಲು ಅನುಮತಿಯನ್ನು ನೀಡಲಾಗಿದೆ ಎಂದು ಜವಳಿ ಖಾತೆ ಸಚಿವ ಅಬ್ದುಲ್ ಲತಿಫ್ ಸಿದ್ದಿಕಿ ಹೇಳಿದ್ದಾರೆ.

ದೇಶದ ಕೈಮಗ್ಗ ಕಂಪೆನಿಗಳ ಮಾಲೀಕರ ವಿರೋಧದ ಮಧ್ಯೆಯು ಭಾರತೀಯ ಕೈಮಗ್ಗ ಉತ್ಪನ್ನಗಳ ಮೇಲೆ ಹೇರಲಾದ ನಿಷೇಧವನ್ನು ಹಿಂದಕ್ಕೆ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತೀಯ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸಿದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ದೇಶಿಯ ಕಂಪೆನಿಗಳು ಆತಂಕ ವ್ಯಕ್ತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ