ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಥಾಯ್ಲೆಂಡ್‌ನಲ್ಲೂ ಟಾಟಾ ನ್ಯಾನೋ ಕಾರು ಬಿಡುಗಡೆ? (Tata Motors | Thailand | eco-car | Nano | Asian nation)
Bookmark and Share Feedback Print
 
ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ಥಾಯ್ಲೆಂಡ್‌ನಲ್ಲೂ ಪ್ರಯಾಣಿಕ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಭಾನುವಾರ ತಿಳಿಸಿದೆ.

ಆ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ ಪರಿಸರ ಸ್ನೇಹಿ ಪ್ರಯಾಣಿಕರ ಕಾರನ್ನು ಥಾಯ್ಲೆಂಡ್‌ನಲ್ಲೂ ಬಿಡುಗಡೆ ಮಾಡುವ ಚಿಂತನೆ ನಡೆಸಿರುವುದಾಗಿ ಟಾಟಾ ಕಂಪನಿಯ ವಕ್ತಾರರು ಹೇಳಿದ್ದಾರೆ.

ಈ ಕಾರು ಪೂರ್ಣಪ್ರಮಾಣದಲ್ಲಿ ಪರಿಸರ ಸ್ನೇಹಿಯಾಗಿದ್ದು, ಅದು ಥಾಯ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸವ್ಯಕ್ತಪಡಿಸಿದ್ದಾರೆ. ಆದರೆ ಕಾರಿನ ಮಾದರಿಯಾಗಲಿ, ಯಾವಾಗ ಬಿಡುಗಡೆ ಮಾಡಲಾಗುವುದು ಎಂಬ ವಿವರಗಳನ್ನು ಮಾತ್ರ ತಿಳಿಸಿಲ್ಲ.

ಏತನ್ಮಧ್ಯೆ ಈಗಾಗಲೇ ಪ್ರಪಂಚದಾದ್ಯಂತ ಸಾಕಷ್ಟು ಜನಜನಿತವಾಗಿರುವ ಟಾಟಾ ಮೋಟಾರ್ಸ್‌ನ 1ಲಕ್ಷ ರೂಪಾಯಿ ನ್ಯಾನೋ ಕಾರು ಥಾಯ್ಲೆಂಡ್‌ನಲ್ಲೂ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಥಾಯ್ ಮಾಧ್ಯಮಗಳ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ