ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಾಜಧಾನಿ ರೈಲುಗಳಲ್ಲಿ 3ಜಿ ತರಂಗಾಂತರ ಜಾಹೀರಾತು (3G spectrum | Ads | Rajdhani trains | Mobile service)
Bookmark and Share Feedback Print
 
3ಜಿ ತರಂಗಾಂತರಗಳ ಮಾಹಿತಿಯನ್ನೊಳಗೊಂಡ ವಿವರಗಳು ಜಾಹೀರಾತು ರೂಪದಲ್ಲಿ, ರಾಜಧಾನಿ ರೈಲುಗಳಲ್ಲಿ ರಾರಾಜಿಸಲಿವೆ.

3ಜಿ ತರಂಗಾಂತರಗಳ ಪ್ರಚಾರಕ್ಕಾಗಿ ದಕ್ಷಿಣಭಾರತದಿಂದ ಹೊರಡುವ ರಾಜಧಾನಿ ರೈಲುಗಳ ಕೋಚ್‌ಗಳಲ್ಲಿ ಜಾಹೀರಾತುಗಳನ್ನು ಅಳವಡಿಸಲಾಗುತ್ತದೆ. ಚೆನ್ನೈ,ಬೆಂಗಳೂರು ಮತ್ತು ತಿರುವನಂತಪುರಂ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು 3ಜಿ ತರಂಗಾಂತರಗಳ ಪ್ರಚಾರಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ರೈಲಿನಲ್ಲಿ 17 ಕೋಚ್‌ಗಳಿದ್ದು, ಎಲ್ಲಾ ಕೋಚ್‌ಗಳಲ್ಲಿ 3ಜಿ ತರಂಗಾಂತರಗಳ ಸಂಪೂರ್ಣ ವಿವರಗಳನ್ನೊಳಗೊಂಡ ಜಾಹೀರಾತುಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿಯೊಂದು ಕೋಚ್‌ನ ಜಾಹೀರಾತಿನಿಂದ ರೈಲ್ವೆ ಇಲಾಖೆ 33 ಲಕ್ಷ ರೂಪಾಯಿ ಆದಾಯ ಗಳಿಸಿದೆ. ಜಾಹೀರಾತಿಗಾಗಿ ಕೋಚ್‌ಗಳನ್ನು ಬಳಸಿಕೊಳ್ಳುವ ಕಂಪೆನಿಗಳು ಕೋಚ್ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ