ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರತನ್‌ ಟಾಟಾಗೆ ಗ್ಲೋಬಲ್ ಇಂಡಿಯನ್ ಅವಾರ್ಡ್ (Ratan Tata | Tata Group | Global Indian award | Honour)
Bookmark and Share Feedback Print
 
ದೇಶದ ಖ್ಯಾತ ಉದ್ಯಮಿ ಹಾಗೂ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರ ಜಾಗತಿಕ ಮಟ್ಟದ ನಾಯಕತ್ವ, ದೂರದೃಷ್ಠಿ ಹಾಗೂ ವೃತ್ತಿಪರ ಸಾಧನೆಗಾಗಿ, 2010ರ ಚಂಚಲಾನಿ ಗ್ಲೋಬಲ್ ಇಂಡಿಯನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಗ್ಲೋಬಲ್ ಇಂಡಿಯನ್ ಅವಾರ್ಡ್ ಬಹುಮಾನದ ಮೊತ್ತ 1ಕೋಟ ರೂಪಾಯಿಗಳಾಗಿದ್ದು, ವಾಂಕೊವರ್‌ನಲ್ಲಿ ನಡೆಯಲಿರುವ ಗಾಲಾ ಆಫ್ ಇಂಡಿಯಾ ಕೆನಡಾ ಫೌಂಡೇಶನ್‌ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರತನ್ ಟಾಟಾ ಅವರನ್ನು ಗೌರವಿಸಲಾಗುವುದು ಎಂದು ಕೆನಡಾ-ಇಂಡಿಯಾ ಫೌಂಡೇಶನ್ ಮುಖ್ಯಸ್ಥರಾದ ಬರ್ಜ್ ಧಹಾನ್ ಹೇಳಿದ್ದಾರೆ.

1962 ಮತ್ತು 1991ರಲ್ಲಿ ದೇಶದ ಬೃಹತ್ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜೆಆರ್‌ಡಿ ಟಾಟಾ, ಅವರನ್ನು ಸುಪುತ್ರ ರತನ್ ಟಾಟಾ ಸರಿಗಟ್ಟಿದ್ದಾರೆ.

ರತನ್ ಟಾಟಾ ಅವರ ಮಾರ್ಗದರ್ಶನದಲ್ಲಿ, ಟಾಟಾ ಗ್ರೂಪ್ ಕಂಪೆನಿ ಫೋರ್ಡ್ ಕಂಪೆನಿ ಜಾಗ್ವಾರ್ ಲಾಂಡ್ ರೋವರ್, ಕೋರಸ್ ಕಂಪೆನಿಯನ್ನು ಖರೀದಿಸಿದೆ.

2008ರಲ್ಲಿ ರತನ್ ಟಾಟಾ ಅವರನ್ನು ಕೇಂದ್ರ ಸರಕಾರ, ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ