ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉತ್ಪಾದನಾ ಸಾಮರ್ಥ್ಯ ದ್ವಿಗುಣ:ಹಿಂದೂಸ್ತಾನ್ ಮೋಟಾರ್ಸ್ (Hindustan Motors | TN plant | Capacity | Double)
Bookmark and Share Feedback Print
 
ನಗರದ ತಿರುವಳ್ಳುವರ್‌ನಲ್ಲಿ ಕಾರು ತಯಾರಿಕೆ ಘಟಕವನ್ನು, ಮುಂಬರುವ 2012ರ ವೇಳೆಗೆ ತಯಾರಿಕೆ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿ.ಕೆ. ಬಿರ್ಲಾ ಮಾಲೀಕತ್ವದ ಹಿಂದೂಸ್ತಾನ್ ಮೋಟಾರ್ಸ್‌ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಿರುವುಳ್ಳುವರ್ ಘಟಕದಲ್ಲಿ ಪ್ರಸ್ತುತ 12,000 ಕಾರುಗಳನ್ನು ತಯಾರಿಸುವ ಸಾಮರ್ಥ್ಯವಿದ್ದು,ಈಗಾಗಲೇ 5000 ಕಾರುಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ಎರಡು ವರ್ಷಗಳ ಅವಧಿಯೊಳಗೆ ಕಾರು ತಯಾರಿಕೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಹಿಂದೂಸ್ತಾನ್ ಮೋಟಾರ್ಸ್‌ನ ಭಾರತದ ಉಪಾಧ್ಯಕ್ಷ ವೈ.ವಿ.ಎಸ್ ವಿಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಮೋಟಾರ್ಸ್ ಕಂಪೆನಿ, ಭಾರತದಲ್ಲಿ ತಮಿಳುನಾಡಿನ ತಿರುವುಳ್ಳವರ್ ಮತ್ತು ಪಶ್ಚಿಮ ಬಂಗಾಳದ ಉತ್ತರ್‌ಪರಾ ನಗರಗಳಲ್ಲಿ ಕಾರು ತಯಾರಿಕೆ ಘಟಕಗಳನ್ನು ಹೊಂದಿದೆ.

ಕಂಪೆನಿ, ಲ್ಯಾನ್ಸರ್, -ಸೆಡಿಯಾ. ಔಟ್‌ಲ್ಯಾಂಡರ್, ಪಜೆರೊ ಮತ್ತು ಮೊಂಟೆರೊ ಸೇರಿದಂತೆ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ. ಜಪಾನ್‌ನ ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಮಿತುಬುಶಿಯೊಂದಿಗೆ ತಂತ್ರಜ್ಞಾನ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ