ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಕ್ಷಯ ತದಿಗೆ:ಚಿನ್ನದ ಮಾರಾಟದಲ್ಲಿ ಭಾರಿ ಕುಸಿತ (Akshaya Tritiya | Gold festival | India | Prices)
Bookmark and Share Feedback Print
 
PTI
ಚಿನ್ನದ ದರ ಏರಿಕೆಯಿಂದಾಗಿ, ಅಕ್ಷಯ ತದಿಗೆ ಹಬ್ಬದ ದಿನದಂದು ಚಿನ್ನದ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ದೇಶದ ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಸ್ಥಿರತೆ ಕಂಡುಕೊಂಡಲ್ಲಿ, ವರ್ಷದ ಇತರ ತಿಂಗಳುಗಳಲ್ಲಿ ಚಿನ್ನದ ಖರೀದಿಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರ್ತಕರು ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಹು ಜನಪ್ರಿಯತೆಯನ್ನು ಪಡೆದಿರುವ ಅಕ್ಷಯ ತದಿಗೆ ದಿನದಂದು, ಚಿನ್ನದ ಮಾರಾಟದಲ್ಲಿ ಭಾರಿ ಇಳಿಕೆ ಕಂಡಿದೆ.

ಹಬ್ಬಕ್ಕೆ ಕೇವಲ 10 ದಿನಗಳಿರುವಂತೆ ಚಿನ್ನದ ದರದಲ್ಲಿ ಏರಿಕೆಯಾಗಿದ್ದರಿಂದ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಚಿನ್ನದ ಮಾರಾಟದಲ್ಲಿ ಕುಸಿತವಾಗಿದೆ ಎಂದು ಲಕ್ನೋ ನಗರದ ಚಿನಿವಾರಪೇಟೆಯ ಅಧ್ಯಕ್ಷ ಲೋಕೇಶ್ ಕುಮಾರ್ ಅಗರ್‌ವಾಲ್ ಹೇಳಿದ್ದಾರೆ.

ಕಳೆದ ವರ್ಷ 10 ಗ್ರಾಂ ಚಿನ್ನವನ್ನು ಖರೀದಿಸಿದ್ದ ಗ್ರಾಹಕರು, ಈ ಬಾರಿ ಕೇವಲ ಎರಡು ಗ್ರಾಂ ಚಿನ್ನವನ್ನು ಖರೀದಿಸಿದ್ದಾರೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ವಿದೇಶಿ ಶೇರುಪೇಟೆಗಳ ತೊಳಲಾಟದಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನವನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಗಗನಕ್ಕೇರಿದೆ.

ಇಂದಿನ ಮಾರುಕಟ್ಟೆಗಳ ಚಿನ್ನದ ದರ, ಪ್ರತಿ 10 ಗ್ರಾಂಗೆ 18,416 ರೂಪಾಯಿಗಳಿಗೆ ತಲುಪಿದೆ. ಕಳೆದ ವಾರ ಪ್ರತಿ 10ಗ್ರಾಂಗೆ ದಾಖಲೆಯ 18,339 ರೂಪಾಯಿಗಳಿಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ