ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾನೋಟಾರ್ಸ್‌ಗೆ ರಾಜೀವ್ ದುಬೈ ರಾಜೀನಾಮೆ (Tata Motors|Rajiv Dube)
Bookmark and Share Feedback Print
 
ಅಚ್ಚರಿಯ ಬೆಳವಣಿಗೆಯೊದರಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನಗಳ ವಿಭಾಗದ ಮುಖ್ಯಸ್ಥ ರಾಜೀವ್ ದುಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನ್ಯಾನೋ, ಇಂಡಿಗೊ ಸೆಡಾನ್ ಸೇರಿದಂತೆ ಇತರ ನೂತನ ಆವೃತ್ತಿಯ ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ತಮ್ಮ ಪ್ರತಿಭೆಯ ಛಾಪು ಮೂಡಿಸಿದ್ದ ದುಬೈಯವರ ರಾಜೀನಾಮೆ ಉದ್ಯಮ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ದುಬೈಯವರ ರಾಜೀನಾಮೆಯಿಂದಾಗಿ ಖಾಲಿಯಾದ ಹುದ್ದೆಗೆ ನ್ಯಾನೋ ಕಾರು ತಯಾರಿಕೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಗಿರೀಶ್ ವಾಘ್ ಅವರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.

ದುಬೈಯವರ ರಾಜೀನಾಮೆ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಟಾಟಾ ಮೋಟಾರ್ಸ್‌ನ ಉಪಾಧ್ಯಕ್ಷ ಎಸ್.ಕೃಷ್ಣನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ