ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉಕ್ಕು ಘಟಕ ಸ್ಥಾಪನೆ:ಟಾಟಾ, ಸೇಲ್ ಮಾತುಕತೆ (Tata | SAIL| Steel unit)
Bookmark and Share Feedback Print
 
ಉಕ್ಕಿನ ಘಟಕವನ್ನು ಜಂಟಿಯಾಗಿ ಸ್ಥಾಪಿಸಲು ಟಾಟಾ ಸ್ಟೀಲ್ ಕಂಪೆನಿಯೊಂದಿಗೆ ಆರಂಭಿಕ ಮಾತುಕತೆಗಳು ನಡೆದಿವೆ ಎಂದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಮುಖ್ಯಸ್ಥ ಎಸ್‌.ಕೆ ರೂಂಗ್ಟಾ ಹೇಳಿದ್ದಾರೆ.

ಟಾಟಾ ಸ್ಟೀಲ್ ಕಂಪೆನಿ ಮತ್ತು ಸೇಲ್‌ ಕಂಪೆನಿಗಳು ಎರಡು ವರ್ಷಗಳ ಹಿಂದೆ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಹಿಹಾಕಿವೆ. ಆದರೆ ಮೊದಲ ಬಾರಿಗೆ ಉಭಯ ಕಂಪೆನಿಗಳು ಉಕ್ಕಿನ ಘಟಕವನ್ನು ಆರಂಭಿಸಲು ಯೋಜನೆಯನ್ನು ರೂಪಿಸುತ್ತಿವೆ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಉಕ್ಕು ಉತ್ಪಾದಕ ಕಂಪೆನಿ ಅರ್ಸೆಲ್ಲರ್ ಮಿತ್ತಲ್, ದಕ್ಷಿಣ ಕೊರಿಯಾದ ಉಕ್ಕು ಉತ್ಪಾದಕ ಕಂಪೆನಿ ಪೊಸ್ಕೊದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.ಪೊಸ್ಕೊ ಕಂಪೆನಿಯೊಂದಿಗೆ ಜಾರ್ಖಂಡ್‌ನಲ್ಲಿ 2 ಮಿಲಿಯನ್ ಟನ್ ಸಾಮರ್ಥ್ಯದ ಉಕ್ಕಿನ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ರೂಂಗ್ಟಾ ತಿಳಿಸಿದ್ದಾರೆ.

ಸೇಲ್ ಕಂಪೆನಿ ದೇಶದಲ್ಲಿರುವ ಐದು ಘಟಕಗಳ ಸಾಮರ್ಥ್ಯ ಹೆಚ್ಚಳ ಹಾಗೂ ವಿಸ್ತರಣೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ.ಏಪ್ರಿಲ್ ತಿಂಗಳ ಅವಧಿಯಲ್ಲಿ ಅಮುದು ವಹಿವಾಟು 1-1.2 ಮಿಲಿಯನ್‌ ಟನ್‌ಗಳಿಗೆ ತಲುಪಿದೆ.ಮುಂಬರುವ 2011ರ ವೇಳೆಗೆ ಬುರ್ನಪುರ್‌ನಲ್ಲಿ 2.5 ಮಿಲಿಯನ್ ಟನ್ ಉಕ್ಕು ಸಾಮರ್ಥ್ಯದ ಘಟಕ ಆರಂಭವಾಗಲಿದೆ ಎಂದು ಎಸ್.ಕೆ.ರೂಂಗ್ಟಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಟಾ ಸ್ಟೀಲ್, ಸೇಲ್, ಉಕ್ಕು ಘಟಕ