ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೋಡಾಫೋನ್‌ಗೆ 8.6 ಬಿಲಿಯನ್ ಪೌಂಡ್ಸ್ ನಿವ್ವಳ ಲಾಭ (Vodafone | Net profits | Cut costs | Sharp jump)
Bookmark and Share Feedback Print
 
ಬ್ರಿಟನ್ ಮೂಲದ ದೈತ್ಯ ಮೊಬೈಲ್ ಕಂಪೆನಿ ವೋಡಾಫೋನ್, ಮಾರ್ಚ್ 31ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ತ್ರಿಗುಣವಾಗಿದ್ದು 8,645 ಬಿಲಿಯನ್‌ ಪೌಂಡ್‌ಗಳಿಗೆ ತಲುಪಿದೆ.

2008-09ರ ಅವಧಿಯಲ್ಲಿ ವೆಚ್ಚಕಡಿತ ಹಾಗೂ ಮಾರಾಟದಲ್ಲಿ ಹೆಚ್ಚಳದಿಂದಾಗಿ ನಿವ್ವಳ ಲಾಭ 3,078 ಬಿಲಿಯನ್ ಪೌಂಡ್ಸ್‌‌ಗೆ ತಲುಪಿತ್ತು.
ಕಂಪೆನಿಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ವೋಡಾಫೋನ್ ಮುಖ್ಯಸ್ಥ ವಿಟ್ಟೊರಿಯೊ ಕೊಲಾವೊ ತಿಳಿಸಿದ್ದಾರೆ.

ಕಂಪೆನಿಯ ಉತ್ಪನ್ನಗಳಿಂದ ನಿವ್ವಳ ಆದಾಯದಲ್ಲಿ ಶೇ.33ರಷ್ಟು ಹೆಚ್ಚಳವಾಗಿದೆ.ಮೊಬೈಲ್ ಡಟಾ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಗಳಿಂದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಕಂಪೆನಿಯ ಅನಗತ್ಯ ವೆಚ್ಚದಲ್ಲಿ ಕಡಿತ ಹಾಗೂ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ ನಿವ್ವಳ ಲಾಭದಲ್ಲಿ ಹೆಚ್ಚಳವಾಗಲು ಕಾರಣವಾಗಿದೆ ಎಂದು ವಿಟ್ಟೊರಿಯೊ ಕೊಲಾವೊ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ