ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕರಕೌಶಲ ರಫ್ತು ವಹಿವಾಟಿನಲ್ಲಿ ಶೇ.16ರಷ್ಟು ಹೆಚ್ಚಳ (India| Handicrafts | Exports | US market | EU)
Bookmark and Share Feedback Print
 
ಭಾರತದ ಕರಕೌಶಲ ರಫ್ತು ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಏಪ್ರಿಲ್ ತಿಂಗಳ ಅವಧಿಯ ರಫ್ತು ವಹಿವಾಟಿನಲ್ಲಿ ಶೇ.16ರಷ್ಟು ಏರಿಕೆಯಾಗಿ 179 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ ರಫ್ತು ವಹಿವಾಟು 154.78 ಮಿಲಿಯನ್ ಡಾಲರ್‌ಗಳಾಗಿತ್ತು.

ನಮಗೆ ಅಮೆರಿಕದ ಮಾರುಕಟ್ಟೆಯಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಕರಕೌಶಲ ರಫ್ತು ಬೇಡಿತೆಯಲ್ಲಿ ಕುಸಿತವಾಗಿದೆ ಎಂದು ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿ ಕ್ರಾಫ್ಟ್ಸ್‌ ಮುಖ್ಯಸ್ಥ ರಾಜ್ ಮಲ್ಹೋತ್ರಾ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ರಫ್ತು ವಹಿವಾಟಿನಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ,ಪ್ರಸಕ್ತ ವರ್ಷದ ಅವದಿಯಲ್ಲಿ ರಫ್ತು ವಹಿವಾಟು ಶೇ.9 ರಿಂದ ಶೇ.10ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮಲ್ಹೋತ್ರಾ ವಿಶ್ವಾಸವ್ಯಕ್ತಪಡಿಸಿದ್ದಾರೆ.

ದೇಶದ ಕರಕೌಶಲ ರಫ್ತು ವಹಿವಾಟಿನಲ್ಲಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಶೇ.70ರಷ್ಟು ಪಾಲನ್ನು ಹೊಂದಿವೆ.

ಮೊರ್ದಾಬಾದ್, ಜೈಪುರ್, ಶಹರಾನ್ ಪುರ್, ಜೋಧಪುರ್ ಮತ್ತು ನರಸಾಪುರ್ ನಗರಗಳು ಕರಕೌಶಲದ ಪ್ರಮುಖ ಕೇಂದ್ರಗಲಾಗಿದ್ದು,ಸುಮಾರು 10 ಲಕ್ಷ ಜನತೆ ಕರಕೌಶಲ ಉದ್ಯಮವನ್ನು ಅವಲಂಬಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ