ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಗೋಧಿ ದರ ಹೆಚ್ಚಳವಾಗಿದೆ: ಬಾಂಗ್ಲಾದೇಶ (Indian wheat, Bangladesh, International market)
Bookmark and Share Feedback Print
 
ಭಾರತದ ಗೋಧಿಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿರುವುದರಿಂದ, ಭಾರತದಿಂದ ಗೋಧಿಯನ್ನು ಖರೀದಿಸುವುದಿಲ್ಲ ಎಂದು ಬಾಂಗ್ಲಾದೇಶದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಗೋಧಿ ರಫ್ತು ಮೇಲೆ ಹೇರಿದ ಮೂರು ವರ್ಷಗಳ ನಿಷೇಧದ ನಂತರ, ಸರಕಾರ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿದೆ. ರಷ್ಯಾ, ತುರ್ಕಿ ಮತ್ತು ಉಕ್ರೇನ್ ದೇಶಗಳ ಗೋಧಿ ದರಕ್ಕೆ ಹೋಲಿಸಿದಲ್ಲಿ ಭಾರತದ ಗೋಧಿ ದರ ಹೆಚ್ಚಳವಾಗಿದೆ ಎಂದು ಆಹಾರ ಇಲಾಖೆಯ ಪ್ರಧಾನ ನಿರ್ದೇಶಕ ಅಹ್ಮದ್ ಹೊಸಾನ್ ಖಾನ್ ತಿಳಿಸಿದ್ದಾರೆ.

ಬಾಂಗ್ಲಾದೇಶ, ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೆಂಡರ್ ಕರೆದು ಕಡಿಮೆ ದರದಲ್ಲಿ ನೀಡುವ ರಾಷ್ಟ್ರದ ಗೋಧಿಯನ್ನು ಖರೀದಿಸುತ್ತದೆ ಎಂದು ಹೊಸೈನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಗೋಧಿ ದರ ಪ್ರತಿ ಟನ್‌ಗೆ 300 ಡಾಲರ್‌ಗಳಾಗಿವೆ. ಆದರೆ ಉಕ್ರೇನ್, ರಷ್ಯಾ ಮತ್ತು ತುರ್ಕಿ ದೇಶಗಳಿಂದ ಗೋಧಿ ಅಮುದು ಮಾಡಿಕೊಂಡಲ್ಲಿ ಪ್ರತಿ ಟನ್‌ ಗೋಧಿಗೆ 257 ಡಾಲರ್‌ಗಳಿಗೆ ದೊರೆಯುತ್ತದೆ ಎಂದು ಹೊಸೈನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ