ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೋಧಿ ಉತ್ಪನ್ನಗಳ ರಫ್ತು ವಹಿವಾಟು ವಿಸ್ತರಣೆ (Wheat products | Export | Rava | Maida | Government)
Bookmark and Share Feedback Print
 
ಭಾರತದ ಉತ್ಪನ್ನಗಳಾದ ಗೋಧಿ, ರವಾ, ಮೈದಾಗೆ ವಿದೇಶಿಗಳಲ್ಲಿ ಬಹುಬೇಡಿಕೆಯ ಹಿನ್ನೆಲೆಯಲ್ಲಿ, ಮಾರ್ಚ್ 31 2011ರವರೆಗೆ ರಫ್ತು ವಹಿವಾಟು ಅವಧಿಯನ್ನು ಸರಕಾರ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

ಗೋಧಿ ಉತ್ಪನ್ನಗಳನ್ನು 6,50,000 ಟನ್‌ಗಳವರೆಗೆ 2011ರ ಮಾರ್ಚ್ 31ರವರೆಗೆ ರಫ್ತು ಮಾಡಬಹುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಪ್ರಧಾನ ನಿರ್ದೇಶಕರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ಅವಧಿಯಲ್ಲಿ 6.5 ಲಕ್ಷ ಟನ್ ಗೋದಿ ಉತ್ಪನ್ನಗಳಲ್ಲಿ ಕೇವಲ 23,000 ಟನ್ ಮಾತ್ರ ರಫ್ತು ಮಾಡಲಾಗಿತ್ತು. 2007ರಿಂದ ಗೋಧಿ ಉತ್ಪನ್ನಗಳ ರಫ್ತು ವಹಿವಾಟನ್ನು ಸರಕಾರ ನಿಷೇಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ