ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಜಾಜ್ ಕ್ಯಾಪಿಟಲ್‌ನಿಂದ ವೆಲ್ತ್ ಕೆಫೆ ಆರಂಭ (Bajaj Capital | Wealth Cafe | Wealthy investors | Coffee)
Bookmark and Share Feedback Print
 
ಬಂಡವಾಳ ಹೂಡಿಕೆ ಸಂಸ್ಥೆಯಾದ ಬಜಾಜ್ ಕ್ಯಾಪಿಟಲ್, ಹೂಡಿಕೆದಾರರಿಗಾಗಿ ವೆಲ್ತ್ ಕೆಫೆ ಮಳಿಗೆಗಳನ್ನು ಆರಂಭಿಸಲಾಗಿದ್ದು,ಹೂಡಿಕೆದಾರರು ಕಾಫಿಯನ್ನು ಹೀರುತ್ತಾ ತಮ್ಮ ಹೂಡಿಕೆಗಳಿಗಾಗಿ ಆರ್ಥಿಕ ತಜ್ಞರ ಸಂಪರ್ಕ ಹಾಗೂ ಸಲಹೆಯನ್ನು ಪಡೆಯಬಹುದಾಗಿದೆ.

ಹೂಡಿಕೆಗಳಿಗಾಗಿ ಸಲಹೆ ನೀಡುವ ಹಾಗೂ ಆರ್ಥಿಕ ಯೋಜನೆಗಳನ್ನು ಹಮ್ಮಿಕೊಳ್ಳುವ ಬಜಾಜ್ ಕ್ಯಾಪಿಟಲ್,ನೊಯಿಡಾದಲ್ಲಿ ಮೊದಲ ಬಾರಿಗೆ ವೆಲ್ತ್‌ ಕೆಫೆಯನ್ನು ಆರಂಭಿಸಲಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಪ್ರಮುಖ ಆರು ನಗರಗಳಲ್ಲಿ ಸುಮಾರು 25 ವೆಲ್ತ್ ಕೆಫೆ ಮಳಿಗೆಗಳನ್ನು ಆರಂಭಿಸುವ ಯೋಜನೆಯಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಶಾಂಪಿಗ್ ಮಾಲ್‌ಗಳಲ್ಲಿ ಆರಂಭಿಸಲಾಗುವುದು ಎಂದು ಬಜಾಜ್ ಮೂಲಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಿಂದ ಶಾಪಿಂಗ್ ಮಾಲ್ ಸಂಸ್ಕ್ರತಿ ವ್ಯಾಪಕ ಬೆಳವಣಿಗೆ ಕಂಡಿದ್ದು, ಶಾಪಿಂಗ್ ಮಾಲ್‌ಗಳಲ್ಲಿ ವೆಲ್ತ್ ಕೆಫೆಗಳನ್ನು ಆರಂಭಿಸಿದಲ್ಲಿ, ಉತ್ತಮ ಪ್ರತಿಕ್ರಿಯೆ ದೊರೆಯುವ ಸಾಧ್ಯತೆಗಳಿವೆ ಎಂದು ಬಜಾಜ್ ಕ್ಯಾಪಿಟಲ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ದೀಪ್ ಬಜಾಜ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ