ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ : 3.63ಬಿನ್ ಡಾಲರ್‌ಗೆ ಹರಾಜು ಅಂತ್ಯ (3G mobile spectrum | Government | Auction | Revenue)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು ಬಿಡ್‌, 33ನೇ ದಿನದ ಅವಧಿಯಲ್ಲಿ 3.63 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, 3ಜಿ ಹರಾಜಿನಿಂದ ಸರಕಾರಕ್ಕೆ 668 ಬಿಲಿಯನ್ ರೂಪಾಯಿಗಳ ಆದಾಯವಾಗುವ ನಿರೀಕ್ಷೆಯಿದೆ.

3ಜಿ ತರಂಗಾಂತರಗಳ ಹರಾಜು ಬಿಡ್‌ ಆರಂಭವಾಗಿ 180 ಸುತ್ತುಗಳಿಗೆ ತಲುಪಿ ಮುಕ್ತಾಯಗೊಂಡಿದೆ ಎಂದು ಕೇಂದ್ರದ ಟೆಲಿಕಾಂ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಭಾರ್ತಿ ಏರ್‌ಟೆಲ್, ರಿಲಯನ್ಸ್ ಕಮ್ಯೂನಿಕೇಶನ್ಸ್, ವೋಡಾಫೋನ್, ಸೇರಿದಂತೆ ಒಂಬತ್ತು ಖಾಸಗಿ ಟೆಲಿಕಾಂ ಕಂಪೆನಿಗಳು 3ಜಿ ತರಂಗಾಂತರಗಳನ್ನು ಪಡೆಯಲು ಬಿಡ್‌ನಲ್ಲಿ ಪಾಲ್ಗೊಂಡಿವೆ.

ಕೇಂದ್ರ ಸರಕಾರ 3ಜಿ ತರಂಗಾಂತರಗಳ ಹರಾಜಿಗಾಗಿ, 35 ಬಿಲಿಯನ್ ರೂಪಾಯಿಗಳಿಗೆ ಮೀಸಲಾಗಿರಿಸಿತ್ತು.ಸರಕಾರ ನಾಲ್ಕು ಕಂಪೆನಿಗಳಿಗೆ 3ಜಿ ತರಂಗಾಂತರಗಳನ್ನು ಹಂಚಲಾಗಿದ್ದು, ಮೂರು ಖಾಸಗಿ ಕಂಪೆನಿಗಳಿಗೆ ಹಾಗೂ ಒಂದನ್ನು ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗೆ ನೀಡಲಾಗುತ್ತದೆ ಎಂದು ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ