ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಚ್‌ಇಎಲ್ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಿ:ಮೀನಾ (BHEL | Government | Public sector | Competition)
Bookmark and Share Feedback Print
 
ಸರಕಾರಿ ಸ್ವಾಮ್ಯದ ವಿದ್ಯುತ್ ಉಪಕರಣ ತಯಾರಿಕೆ ಸಂಸ್ಥೆ ಬಿಎಚ್‌ಇಎಲ್,ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಗಳ ಸವಾಲುಗಳನ್ನು ಎದುರಿಸಲು ಸಿದ್ಧವಾಗುವ ಅಗತ್ಯವಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಕೈಗಾರಿಕೆ ಕ್ಷೇತ್ರದಲ್ಲಿ ಬಿಎಚ್‌ಇಎಲ್ ಅಗ್ರಸ್ಥಾನದಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅತ್ಯಾಧುನಿಕತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಭಾರಿ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಬಿ.ಎಸ್.ಮೀನಾ ಸಲಹೆ ನೀಡಿದ್ದಾರೆ.

ಬಿಎಚ್‌ಇಎಲ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ ರಾವ್ ಅವರೊಂದಿಗೆ ಘಟಕಕ್ಕೆ ಭೇಟಿ ನೀಡಿದ ಮೀನಾ, ಬಿಎಚ್‌ಇಎಲ್ ಕಂಪೆನಿ ಈಗಾಗಲೇ ಹಲವಾರು ಮೈಲುಗಲ್ಲನ್ನು ದಾಟಿದ್ದು, ಅಗತ್ಯವಾದ ಉಪಕರಣಗಳನ್ನು ಸಿದ್ಧಪಡಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಮುದು ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದರು.

ಕಂಪೆನಿಗೆ ಅಗತ್ಯವಾದ ನೆರವು ನೀಡಲು ಸಚಿವಾಲಯ ಸಿದ್ಧವಿದ್ದು, ಯಶಸ್ವಿನತ್ತ ಸಾಗಿದೆ.ಆದರೆ ನೂತನ ಅವಕಾಶಗಳು ಹಾಗೂ ಸವಾಲುಗಳನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಎದುರಿಸಬೇಕಾಗಿದೆ ಎಂದು ಬಿ.ಎಸ್ ಮೀನಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ