ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೂತನ ಆವೃತ್ತಿಯ ಅಲ್ಟೋ ಮಾಡೆಲ್‌ ಬಿಡುಗಡೆ:ಮಾರುತಿ (Alto | Maruti Suzuki | K series)
Bookmark and Share Feedback Print
 
ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಝುಕಿ ಇಂಡಿಯಾ, ನೂತನ ಆವೃತ್ತಿಯ ಅಲ್ಟೋ ಮಾಡೆಲ್ ಕಾರನ್ನು ಬಿಡುಗಡೆ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮಾರುತಿ ಸುಝುಕಿ ಕಂಪೆನಿಯ ಮೂಲಗಳ ಪ್ರಕಾರ, ನೂತನ ಆವೃತ್ತಿಯ ಅಲ್ಟೋ ಮಾದರಿಯ ಕಾರು ಒಂದು ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದ್ದು, ಅತ್ಯಾಧುನಿಕ ಕೆ- ಸೀರಿಸ್ ಇಂಜಿನ್ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಾರುತಿ ಸುಝುಕಿ ಇಂಡಿಯಾದ ಮುಖ್ಯಸ್ಥ ಆರ್‌.ಸಿ.ಭಾರ್ಗವಾ ಅವರನ್ನು ಸಂಪರ್ಕಿಸಿದಾಗ, ಅಲ್ಟೋ ಮಾಡೆಲ್‌ ಕಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಇಂಜಿನ್ ಅಳವಡಿಸುವ ಅವಶ್ಯಕತೆಯಿದ್ದು,ಆದರೆ ಯಾವಾಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ ಎನ್ನುವುದನ್ನು ಹೇಳಲು ನಿರಾಕರಿಸಿದರು.

ಅಲ್ಟೋದ ನೂತನ ಆವೃತ್ತಿಯ ಕಾರಿಗೆ ಕೆೃಸೀರಿಸ್ ಇಂಜಿನ್ ಅಳವಡಿಸುವುದರಿಂದ, ಅಸ್ತಿತ್ವದಲ್ಲಿರುವ ಅಲ್ಟೋ ಮಾಡೆಲ್ ಕಾರಿಗಿಂತ ದರದಲ್ಲಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಅಲ್ಟೋ ಮಾಡೆಲ್ ಕಾರು 2.29 ಲಕ್ಷ ರೂಪಾಯಿಗಳಿಂದ 2.8ಲಕ್ಷ ರೂಪಾಯಿ (ಶೋರೂಂ ಹೊರತುಪಡಿಸಿ) ಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ