ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ: ಸರಕಾರಕ್ಕೆ 67,719 ಕೋಟಿ ರೂ. ಜಾಕ್‌ಪಾಟ್ (Telecom| Bharti Airtel | Reliance communications | 3G services)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜು ನಾಲ್ಕು ವರ್ಷಗಳ ನಂತರ, 34 ದಿನಗಳ ಅವಧಿಯಲ್ಲಿ 183 ಸುತ್ತುಗಳನ್ನು ತಲುಪಿ, ಕೊನೆಗೂ ಅಂತ್ಯಗೊಂಡಿದೆ. ಖಾಸಗಿ ಕ್ಷೇತ್ರದ ಭಾರ್ತಿ ಏರ್‌ಟೆಲ್ ಸಂಸ್ಥೆ ದೇಶದ 22 ವಲಯಗಳಲ್ಲಿ 13 ವಲಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ.

ಕೇಂದ್ರ ಸರಕಾರ 3ಜಿ ತರಂಗಾಂತರಗಳ ಹರಾಜಿನಿಂದ 35 ಸಾವಿರ ಕೋಟಿ ರೂಪಾಯಿ ಆದಾಯವಾಗುವ ನಿರೀಕ್ಷೆಯನ್ನು ಈ ಮೊದಲು ಹೊಂದಿತ್ತು.ಆದರೆ ಭಾರಿ ಸ್ಪರ್ಧೆಯಿಂದಾಗಿ ಸರಕಾರಕ್ಕೆ 67,719 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿದೆ.

ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಈಗಾಗಲೇ ದರ ಸಮರವನ್ನು ಮುಂದುವರಿಸಿವೆ.ಇದೀಗ 3ಜಿ ಹರಾಜಿನ ಬಿಡ್‌ನಲ್ಲಿ ಕೂಡಾ ಭಾರಿ ಪೈಪೋಟಿಯನ್ನು ತೋರಿದವು ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಕಮ್ಯೂನಿಕೇಶನ್ಸ್ 22 ಟೆಲಿಕಾಂ ವಲಯಗಳಲ್ಲಿ ತಲಾ 13 ವಲಯಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾದವು.ಇತರ ಪ್ರಮುಖ ಟೆಲಿಕಾಂ ಕಂಪೆನಿಗಳಾದ ವೋಡಾಫೋನ್, ಎಸ್ಸಾರ್, ಆಡಿಯಾ ಸೆಲ್ಯೂಲರ್, ಟಾಟಾ ಕ್ರಮವಾಗಿ 9,11 ಮತ್ತು 9 ವಲಯಗಳನ್ನು ತಮ್ಮದಾಗಿಸಿಕೊಂಡವು.

ಭಾರ್ತಿ, ರಿಲಯನ್ಸ್ ಮತ್ತು ವೋಡಾಫೋನ್ ಕಂಪೆನಿಗಳು ನವದೆಹಲಿ ಮತ್ತು ಮುಂಬೈ ವಲಯಗಳಿಗೆ 20 ವರ್ಷದ ಪರವಾನಿಗಿ ಪಡೆದಿವೆ.ದೆಹಲಿ 3,317 ಕೋಟಿ ರೂಪಾಯಿ ಬಿಡ್ ಪಡೆದು ಅಗ್ರಸ್ಥಾನ ಪಡೆದಿತ್ತು. ಮುಂಬೈ 3,247 ಕೋಟಿ ರೂಪಾಯಿಗಳ ಬಿಡ್ ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆಯಿತು.
ಸಂಬಂಧಿತ ಮಾಹಿತಿ ಹುಡುಕಿ