ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.49ಕ್ಕೆ ತಲುಪಿದ ಅಹಾರ ಹಣದುಬ್ಬರ ದರ (New Delhi | India | Food price index)
Bookmark and Share Feedback Print
 
ದೇಶದ ಅಹಾರ ಹಣದುಬ್ಬರ ದರ, ಮೇ 8ಕ್ಕೆ ವಾರಂತ್ಯಗೊಂಡಂತೆ ಶೇ.16.49ಕ್ಕೆ ಏರಿಕೆ ಕಂಡಿದ್ದು, ಇಂಧನ ಸೂಚ್ಯಂಕ ದರ ಏರಿಕೆಯಾಗಿ ಶೇ.12.33ಕ್ಕೆ ತಲುಪಿದೆ ಎಂದು ಸರಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ ವಾರ ಅಹಾರ ಹಣದುಬ್ಬರ ದರ ಶೇ.16.44ರಷ್ಟಿತ್ತು. ಅಹಾರ ಹಣದುಬ್ಬರ ದರ ಹೆಚ್ಚಳದಿಂದಾಗಿ ಅಹಾರ ದರಗಳಲ್ಲಿ ಮತ್ತೆ ಏರಿಕೆಯಾಗಿದೆ. ಆದರೆ ಇಂಧ ದರಗಳು ಸ್ಥಿರವಾಗಿವೆ. ಮೇ ತಿಂಗಳ ಆರಂಭದಲ್ಲಿ ಶೇ.16.19 ರಷ್ಟಿದ್ದ ಅಗತ್ಯ ವಸ್ತುಗಳ ಸೂಚ್ಯಂಕ ದರ ಶೇ.16.76ಕ್ಕೆ ಏರಿಕೆಯಾಗಿದೆ.

ಸಗಟು ಸೂಚ್ಯಂಕ ಹಣದುಬ್ಬರ ದರ ಏಪ್ರಿಲ್ ತಿಂಗಳ ಅವಧಿಯಲ್ಲಿ ಶೇ.9.59ರಷ್ಟಿದ್ದು, ಮೇ ತಿಂಗಳಾಂತ್ಯಕ್ಕೆ ಹಣದುಬ್ಹರ ದರ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಹಾರ ಹಣದುಬ್ಬರ ದರ, ನವದೆಹಲಿ