ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಟಿಎಂ ಸಂಶೋಧಕ ಜಾನ್ ಶೆಫೆರ್ಡ್ ನಿಧನ (ATM | Invent | John Shepherd-Barron | Automated teller machine | Died)
Bookmark and Share Feedback Print
 
1967ರಲ್ಲಿ ಮೊಟ್ಟ ಮೊದಲ ಬಾರಿಗೆ ಎಟಿಎಂ ಸಂಶೋಧಿಸಿ ಖ್ಯಾತಿಯನ್ನು ಪಡೆದಿದ್ದ ಜಾನ್ ಶೆಫೆರ್ಡ್-ಬರ್ರಾನ್, ಇಂದು ನಿಧನ ಹೊಂದಿದ್ದಾರೆ.

ಲಂಡನ್‌ನ ಎನ್‌ಫಿಲ್ಡ್ ಪ್ರದೇಶದಲ್ಲಿ ವಾಸವಾಗಿದ್ದ 84 ವರ್ಷ ವಯಸ್ಸಿನ ಜಾನ್ ಶೆಫೆರ್ಡ್, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರದಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಚಾಕೋಲೇಟ್ ವೆಂಡಿಂಗ್ ಮಷಿನ್‌ನಂತೆ,ಬ್ಯಾಂಕ್‌ಗಳು ಯಾಕೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎನ್ನುವ ಆಲೋಚನೆಯನ್ನು ಬೆನ್ನಟ್ಟಿದ ಶೆಫೆರ್ಡ್, ಅಂತಿಮವಾಗಿ ತಮ್ಮ ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದರು.

ಎಟಿಎಂನಿಂದ ಹಣವನ್ನು ಹೊರತೆಗೆಯಲು ಅಗತ್ಯವಾದ, ನಾಲ್ಕು ಸಂಖ್ಯೆಗಳ ಪಿನ್ ಸಂಖ್ಯೆಯ ಬಗ್ಗೆ ಶೆಫೆರ್ಡ್ ಯೋಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಜಾನ್ ಶೆಫೆರ್ಡ್‌ ಹಣವನ್ನು ಡ್ರಾ ಮಾಡಿಕೊಳ್ಳಲು ಬ್ಯಾಂಕ್‌ಗೆ ತೆರಳಿದ. ಆದರೆ ಅಷ್ಟರಲ್ಲಿ ಬ್ಯಾಂಕ್‌ ಮುಚ್ಚಲಾಗಿತ್ತು. ಚಾಕೋಲೇಟ್ ವೆಂಡಿಂಗ್ ಮಷಿನ್‌ನಂತೆ ಬ್ಯಾಂಕ್ ಹೊರತುಪಡಿಸಿ ಹೊರಗಡೆ ಹಣವನ್ನು ತೆಗೆದುಕೊಳ್ಳುವ ವ್ಯವಸ್ಥೆ ಅಗತ್ಯವಿದೆ ಎಂದು ಭಾವಿಸಿ ಕೊನೆಗೆ ಎಟಿಎಂ ಸಿದ್ಧಪಡಿಸುವಲ್ಲಿ ಸಫಲರಾದರು.

ಮೊಟ್ಟ ಮೊದಲ ಬಾರಿಗೆ ಲಂಡನ್‌ನ ಬಾರ್ಕ್‌ಲೆ ಎನ್‌ಫಿಲ್ಡ್ ಶಾಖೆಯಲ್ಲಿ 1967 ಜೂನ್ 27ರಂದು ಅಳವಡಿಸಲಾಯಿತು.

ತಮ್ಮ ಸೇನಾ ಸಂಖ್ಯೆಯಾದ ಆರು ಡಿಜಿಟ್‌ಗಳ ಸಂಖ್ಯೆ ನೆನಪಿರುವ ವಾಸ್ತವ ಸಂಗತಿ ಅರಿವಾಯಿತು. ಪತ್ನಿ ಕರೋಲಿನಾಳ ಸ್ಮರಣ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದನು. ಆದರೆ ಪತ್ನಿ ಕೇವಲ ನಾಲ್ಕು ಸಂಖ್ಯೆಗಳನ್ನು ಮಾತ್ರ ನೆನಪಿಸಿಕೊಳ್ಳಲು ಸಾಧ್ಯವಾಯಿತು. ಅಂದಿನಿಂದ ನಾಲ್ಕು ಸಂಖ್ಯೆಗಳುಳ್ಳ ಪಿನ್ ಸಂಖ್ಯೆ, ವಿಶ್ವದ ಸ್ಟ್ಯಾಂಡರ್ಡ್‌ ಸಂಖ್ಯೆ ಎಂದು ಕರೆಯಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ