ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಿಂದಾಲ್‌ನಿಂದ ಒಮನ್ ಮೂಲದ ಉಕ್ಕು ಕಂಪೆನಿ ಖರೀದಿ (Jindal Steel | Acquires | Shadeed Iron & Steel | JSPL)
Bookmark and Share Feedback Print
 
ದೇಶದ ಉಕ್ಕು ಉತ್ಪಾದನೆ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಜಿಂದಾಲ್ ಸ್ಟೀಲ್ ಆಂಡ್ ಪವರ್,ಒಮನ್ ಮೂಲದ ಶಾದಿಡ್ ಐರನ್ ಆಂಡ್ ಸ್ಟೀಲ್ ಕಂಪೆನಿಯನ್ನು 464 ಮಿಲಿಯನ್ ಡಾಲರ್ ಪಾವತಿಸಿ ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ವಾರ್ಷಿಕವಾಗಿ 1.5 ಮಿಲಿಯನ್ ಟನ್ಸ್ ಉಕ್ಕು ಉತ್ಪಾದಿಸುವ ಒಮನ್‌ನ ಸೋಹರ್‌ನಲ್ಲಿರುವ ಶಾದಿಡ್ ಐರನ್ ಆಂಡ್ ಸ್ಟೀಲ್ ಕಂಪೆನಿಯನ್ನು ಖರೀದಿಸಲಾಗಿದ್ದು, ಒಪ್ಪಂದ ಅಂತ್ಯಗೊಂಡಿದೆ ಎಂದು ಜಿಂಗಾಲ್ ಸ್ಟೀಲ್ ನಿರ್ದೇಶಕ ಸುಶೀಲ್ ಮರೂ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಾಗರೋತ್ತರ ಕಾರ್ಯಾಚರಣೆ ವಿಸ್ತರಣೆಯ ಅಂಗವಾಗಿ, ಶಾದಿಡ್ ಐರನ್ ಆಂಡ್ ಸ್ಚೀಲ್ ಕಂಪೆನಿಯನ್ನು ಖರೀದಿಸಲಾಗಿದೆ ಎಂದು ಮರೂ ತಿಳಿಸಿದ್ದಾರೆ.

ಶಾದಿಡ್ ಕಂಪೆನಿ ಅನಿಲ-ಆಧಾರಿತ ಘಟಕವಾಗಿದೆ. ನಾವು ಕೂಡಾ ಕೆಲ ಅನಿಲ ಆಧಾರಿತ ಘಟಕಗಳನ್ನು ಸ್ಥಾಪಿಸುತ್ತಿರುವುದರಿಂದ,ನಮ್ಮ ಯೋಜನೆಗೆ ಸೂಕ್ತವಾಗಿತ್ತು. ಆದ್ದರಿಂದ ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಶಾದಿಡ್ ಕಂಪೆನಿಯ ಮಾಲೀಕತ್ವವನ್ನು ಹೊಂದಿರುವ ಯುಎಇ ಮೂಲದ ಅಲ್ ಘಾಯೆತ್ ಹೋಲ್ಡಿಂಗ್ಸ್‌ನೊಂದಿಗೆ ಚರ್ಚೆ ನಡೆದಿದ್ದು, ಕೆಲವೇ ದಿನಗಳಲ್ಲಿ ಖರೀದಿಯ ಪ್ರಕ್ರಿಯೆ ಅಂತ್ಯಗೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ