ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜೂನ್ 7 ರಂದು ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ (EGoM | Natural gas | Petrol | Diesel prices | Pranab Mukherjee)
Bookmark and Share Feedback Print
 
ನೈಸರ್ದಿಕ ಅನಿಲ ದರವನ್ನು ಹೆಚ್ಚಿಸಿದ ನಂತರ ಕೇಂದ್ರ ಸರಕಾರ, ಇಂಧನ ದರಗಳನ್ನು ಹೆಚ್ಚಿಸುವ ಚಿಂತನೆಯಲ್ಲಿದ್ದು, ಜೂನ್ 7 ರಂದು ಅಧಿಕಾರಯುತ ಸಚಿವರ ಗುಂಪಿನ ಸಭೆಯನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಅಧಿಕಾರಯುತ ಸಚಿವರುಗಳ ಸಭೆ,ಜೂನ್ 7 ರಂದು ನಡೆಯಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಮೂಲಗಳು ತಿಳಿಸಿವೆ.

ಪೆಟ್ರೋಲ್ ಮತ್ತುಪ ಡೀಸೆಲ್ ದರ ಏರಿಕೆಯನ್ನು ಸರಕಾರದಿಂದ ಮುಕ್ತಾಗೊಳಿಸುವುದು ಹಾಗೂ ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ದರವನ್ನು ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದು ಸೇರಿದಂತೆ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

ಬುಧವಾರದಂದು ಕೇಂದ್ರ ಸರಕಾರ ನೈಸರ್ಗಿಕ ಅನಿಲ ದರವನ್ನು ದ್ವಿಗುಣಗೊಳಿಸಿದೆ ಪ್ರತಿ ಕ್ಯೂಬಿಕ್ ಮೀಟರ್‌ಗೆ 3.2 ರೂಪಾಯಿಗಳಿಂದ 7.5 ರೂಪಾಯಿಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.ಇದರಿಂದಾಗಿ ವಿದ್ಯುತ್ ಮತ್ತು ಸಿಎನ್‌ಜಿ ದರಗಳಲ್ಲಿ ಏರಿಕೆಯಾಗಲಿದ್ದು,ಪ್ರಯಾಣ ದರಗಳಲ್ಲಿ ಕೂಡಾ ಏರಿಕೆಯಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಅಧಿಕಾರಯುತ ಸಚಿವರುಗಳ ಸಭೆಯಲ್ಲಿ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ, ಕೃಷಿ ಸಚಿವ ಶರದ್ ಪವಾರ್, ರಸಾಯನಿಕ ಹಾಗೂ ಗೊಬ್ಬರ ಖಾತೆ ಸಚಿವ ಎಂ.ಕೆ. ಅಳಗಿರಿ, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಸಾರಿಗೆ ಸಚಿವ ಕಮಲ್‌ನಾಥ್ ಮತ್ತು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಉಪಸ್ಥಿತರಿರಲಿದ್ದಾರೆ.

ಸರಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ನಿರ್ಧಾರದಿಂದ ಮುಕ್ತಗೊಳಿಸಿದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಪ್ರತಿ ಲೀಟರ್‌ಗೆ 6 ರೂಪಾಯಿ ಹೆಚ್ಚಳವಾಗಲಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ತೈಲ ಕಂಪೆನಿಗಳು ಪ್ರತಿನಿತ್ಯ 2,555 ಕೋಟಿ ರೂಪಾಯಿಗಳು, ವಾರ್ಷಿಕವಾಗಿ 90,000 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಎದುರಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ