ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಟಿ ಪ್ರಗತಿಗೆ ಭಾರತದತ್ತ ನೋಡುತ್ತಿದೆ ಪಾಕ್ (Pakistan IT | Information Technology | India | IT)
Bookmark and Share Feedback Print
 
ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಸುಧಾರಣೆಯಾಗುವ ನಿಟ್ಟಿನಲ್ಲಿ ಭಾರತದತ್ತ ಮುಖ ಮಾಡಿದ್ದು, ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಭಾರತದ ಪಾಲುದಾರಿಕೆ ಬಯಸುತ್ತಿದೆ.

ಪಾಕಿಸ್ತಾನದ ಐಟಿ ಉದ್ಯಮ ಕ್ಷೇತ್ರವು ಪುಟ್ಟದಾಗಿದೆ. ಅಂದಾಜು 30 ನೌಕರರಿರುವ ಪುಟ್ಟ ಸಂಸ್ಥೆಗಳು, 30 ದಶಲಕ್ಷ ಡಾಲರ್ ಸಂಪಾದಿಸುವಷ್ಟಿದ್ದರೆ, ಭಾರತದಲ್ಲಿ 70 ಸಾವಿರ ಉದ್ಯೋಗಿಗಳಿರುವ, ಕೋಟಿಗಟ್ಟಲೆ ಸಂಪಾದಿಸುವ ಸಾಮರ್ಥ್ಯವಿದೆ. ಹೀಗಾಗಿ ನಾವು ಭಾರತವನ್ನು ಅನುಕರಿಸಲು ಇಚ್ಛಿಸಿದ್ದೇವೆ ಎಂದು ಪಾಕಿಸ್ತಾನ ಸಾಫ್ಟ್‌ವೇರ್ ಹೌಸಸ್ ಅಸೋಸಿಯೇಶನ್ ಫಾರ್ ಐಟಿ & ಐಟಿಇಎಸ್ ಅಧ್ಯಕ್ಷೆ ಜೆಹಾನ್ ಆರಾ ತಿಳಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಭಾರತಕ್ಕೆ ಆಗಮಿಸುತ್ತಿರುವ ಜೆಹಾನ್, ಭಾರತೀಯ ಕಂಪನಿಗಳೊಂದಿಗೆ ವಿಭಿನ್ನ ಪ್ರಾಜೆಕ್ಟ್‌ಗಳ ಪಾಲುದಾರಿಕೆಗೆ ಯತ್ನಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ