ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಿಲ ದರ ಏರಿಕೆಯಿಂದ ವಾರ್ಷಿಕ 1ಸಾ.ಕೋಟಿ ನಷ್ಟ:ಮೋದಿ (Narendra Modi | Gas price | power projects)
Bookmark and Share Feedback Print
 
ಗುಜರಾತ್‌ನಲ್ಲಿರುವ ಬಹುತೇಕ ವಿದ್ಯುತ್ ಉತ್ಪಾದನೆ ಯೋಜನೆಗಳು ಅನಿಲ ಆಧಾರಿತವಾಗಿದ್ದು, ಕೇಂದ್ರ ಸರಕಾರದ ಅನಿಲ ದರ ಏರಿಕೆ ನಿರ್ಧಾರದಿಂದ ವಾರ್ಷಿಕವಾಗಿ 1,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅನಿಲ ದರ ಏರಿಕೆ ಕುರಿತಂತೆ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯವರೊಂದಿಗೆ ರಾಜ್ಯದ ವಾರ್ಷಿಕ ಯೋಜನೆ ಚರ್ಚಿಸಿ, ಅನಿಲ ದರ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರ ಮಂಗಳವಾರದಂದು ನೈಸರ್ಗಿಕ ಅನಿಲ ದರವನ್ನು ದ್ವಿಗುಣಗೊಳಿಸಿ, ಆದೇಶ ಹೊರಡಿಸಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ನೈಸರ್ಗಿಕ ಅನಿಲ ದರವನ್ನು ದ್ವಿಗುಣಗೊಳಿಸಿದ್ದರಿಂದ, ಗುಜರಾತ್‌ಗೆ ಭಾರಿ ಹೊರೆಯಾಗಲಿದ್ದು, ರಾಜ್ಯದಲ್ಲಿ ಶೇ.30 ರಷ್ಟು ವಿದ್ಯುತ್ ಘಟಕಗಳು ಅನಿಲ ಆಧಾರಿತವಾಗಿವೆ. ಇದರಿಂದ ರಾಜ್ಯಕ್ಕೆ ವಾರ್ಷಿಕವಾಗಿ 1 ಸಾವಿರ ಕೋಟಿ ರೂಪಾಯಿ ಹೊರೆಯನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ, ಯೋಜನಾ ಆಯೋಗಕ್ಕೆ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ