ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜೆಟ್‌ ಏರ್‌ವೇಸ್‌ ನಿವ್ವಳ ಲಾಭದಲ್ಲಿ ಶೇ.10.5ರಷ್ಟು ಏರಿಕೆ (Jet Airways | Private carrier | Quarterly | Net profit)
Bookmark and Share Feedback Print
 
ದೇಶದ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ ಏರ್‌ವೇಸ್ ಸಂಸ್ಥೆ, ಪ್ರಯಾಣಿಕ ಸಂಖ್ಯೆಯ ಹೆಚ್ಚಳದಿಂದಾಗಿ ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.10.5ರಷ್ಟು ಏರಿಕೆಯಾಗಿದೆ.

ದೇಶಿಯ ವೈಮಾನಿಕ ಕ್ಷೇತ್ರದ ಚೇತರಿಕೆ ಹಾಗೂ ಅಂತಾರಾಷ್ಟ್ರೀಯ ಕಾರ್ಯಾಚರಣೆಯಲ್ಲಿ, ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಜೆಟ್ ಏರ್‌ವೇಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜೆಟ್ ಏರ್‌ವೇಸ್, ಮಾರ್ಚ್ ತಿಂಗಳಿಗೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ, 585.8 ಮಿಲಿಯನ್ ರೂ.ಗಳ ಲಾಭವಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ ಅವಧಿಯಲ್ಲಿ 529.9 ಮಿನ್ ರೂಪಾಯಿಗಳ ನಿವ್ವಳ ಲಾಭವಾಗಿತ್ತು

ಜೆಟ್‌ಏರ್‌ವೇಸ್ ಕಂಪೆನಿಯ ಒಟ್ಟು ಆದಾಯದಲ್ಲಿ ಕೂಡಾ, 24.65 ಬಿಲಿಯನ್ ರೂಪಾಯಿಗಳಿಂದ 27.78 ಬಿಲಿಯನ್ ರೂಪಾಯಿಗಳಿಗೆ ಏರಿಕೆ ಕಂಡಿದೆ.

ಕ್ರೂಢೀಕೃತ ನಿವ್ವಳ ನಷ್ಟದಲ್ಲಿ ಕೂಡಾ ಇಳಿಕೆಯಾಗಿ, 4.2 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 9.6 ಬಿಲಿಯನ್ ರೂಪಾಯಿಗಳ ನಿವ್ವಳ ನಷ್ಟ ಕಂಡಿತ್ತು ಎಂದು ಜೆಟ್ ಏರ್‌ವೇಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ