ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೂಗಲ್‌ನಿಂದ ಅತ್ಯಾಧುನಿಕ ತಂತ್ರಜ್ಞಾನದ ಟಿವಿ (Google | TV initiative | Sony | Intel | Internet | Cellphone)
Bookmark and Share Feedback Print
 
ಜಾಗತಿಕ ಅಂತರ್ಜಾಲ ದೈತ್ಯ ಸಂಸ್ಥೆ ಗೂಗಲ್, ಸೋನಿ, ಇಂಟೆಲ್ ಮತ್ತು ಲಾಜಿಟೆಕ್ ಕಂಪೆನಿಗಳ ಸಹಭಾಗಿತ್ವದಲ್ಲಿ ಇಂಟರ್‌ನೆಟ್‌ನಲ್ಲಿ ಟೆಲಿವಿಜನ್ ಕಾರ್ಯಕ್ರಮಗಳನ್ನು ವೀಕ್ಷಿಸುವ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಜಾಗತಿಕ ಖ್ಯಾತಿಯ ಗೂಗಲ್ ಸಂಸ್ಥೆ, ಈಗಾಗಲೇ ಇಂಟರ್‌ನೆಟ್ ಮತ್ತು ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ವಿಶ್ವ ಟೆಲಿವಿಜನ್ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಡಲು ಆರಂಭಿಸಿದೆ.

ಇಂಟರ್‌ನೆಟ್ ದೈತ್ಯ ಸಂಸ್ಥೆ ಗೂಗಲ್, ಗುರುವಾರದಂದು ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಕಾರ್ಯಕ್ರಮಗಳನ್ನು ಕೇಬಲ್ ಮತ್ತು ಸೆಟ್‌ಲೈಟ್ ಚಾನೆಲ್‌ಗಳ ಮೂಲಕ ರಿಕಾರ್ಡಿಂಗ್ ಸೌಲಭ್ಯ ಸೇರಿದಂತೆ, ಇಂಟರ್ನೆಟ್‌ನಲ್ಲಿ ಸರ್ಚ್ ಮಾಡುವ ಮೂಲಕ ತಮಗೆ ಇಷ್ಟವಾದ ಚಾನೆಲ್‌ಗಳನ್ನು ನೋಡಬಹುದಾಗಿದೆ.

ಸೋನಿ ಸಂಸ್ಥೆಯ ಬ್ಲೂ-ರೇ ಪ್ಲೇಯರ್ಸ್ ಮತ್ತು ಲಾಜಿಟೆಕ್‌ನ ಸೆಟ್‌-ಅಪ್ ಬಾಕ್ಸ್‌‌ಗಳ ಜಂಟಿ ಸಹಭಾಗಿತ್ವದಲ್ಲಿ ಸೇವೆಯನ್ನು ನೀಡಲಿದೆ. ಸಾಧನದ ದರ ಬಹಿರಂಗಪಡಿಸಲು ಗೂಗಲ್ ಸಂಸ್ಥೆ ನಿರಾಕರಿಸಿದೆ.

ಗೂಗಲ್ ಮುಖ್ಯಸ್ಥ ಎರಿಕ್ ಶಮಿಡ್ಟ್‌ ಮಾತನಾಡಿ, ಟೆಲಿವಿಜನ್ ಮತ್ತು ಇಂಟರ್ನೆಟ್‌ ಕ್ಷೇತ್ರಗಳಲ್ಲಿ ಎದುರಾದ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮೈಕ್ರೋಸಾಫ್ಟ್ ಮತ್ತು ಆಪಲ್ ಕಂಪೆನಿಗಳು ಗ್ರಾಹಕರಿಗೆ ತೊಂದರೆಯಾಗದಂತೆ ಈಗಾಗಲೇ ಪ್ರಯತ್ನಿಸಿವೆ ಎಂದು ಹೇಳಿದ್ದಾರೆ.

ಜಾಗತಿಕ ತಂತ್ರಜ್ಞಾನಗಳಲ್ಲಿ ಭಾರಿ ಬದಲಾವಣೆಯಾಗಿದೆ. ಆದರೆ ಟಿವಿ ತಂತ್ರಜ್ಞಾನದಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ ಎಂದು ಗೂಗಲ್ ಸಂಸ್ಥೆಯ ಯೋಜನಾ ಮುಖ್ಯಸ್ಥ ರಿಶಿ ಚಂದ್ರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ