ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್‌ ಏಷ್ಯಾದಿಂದ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ (Malaysian | Low-cost carrier | AirAsia | Launch)
Bookmark and Share Feedback Print
 
ಮಲೇಷಿಯಾದ ಕಡಿಮೆ ದರದ ವೈಮಾನಿಕ ಸಂಸ್ಥೆಯಾದ ಏರ್‌ ಏಷ್ಯಾ,ಬೆಂಗಳೂರಿಗೆ ನೇರ ವಿಮಾನ ಸಂಚಾರ ಆರಂಭಿಸಿದ್ದು, ಹೃದಯ ರೋಗದಿಂದ ಬಳಲುತ್ತಿರುವ 15 ಮಕ್ಕಳಿಗೆ, ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯತೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರುವುದರೊಂದಿಗೆ ಶುಭಾರಂಭ ಮಾಡಿತು.

ಹೃದಯ ರೋಗದಿಂದ ಬಳಲುತ್ತಿರುವ ಮಕ್ಕಳ್ನು ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, ಆಸ್ಪತ್ರೆಯ ಮುಖ್ಯಸ್ಥೆ ಖ್ಯಾತ ಹೃದಯ ರೋಗ ತಜ್ಞೆ, ದೇವಿ ಶೆಟ್ಟಿ ಶಸ್ತ್ರಕ್ರಿಯೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್‌ ಏಷ್ಯಾ ಗುಂಪಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಕಥ್ಲಿನ್ ಟಾನ್ ಮಾತನಾಡಿ, ಬೆಂಗಳೂರಿಗ ನೇರ ವಿಮಾನ ಸಂಚಾರ ಆರಂಭಿಸಿರುವುದು ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಸೇವೆಯನ್ನು ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರು ಮೂಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ಪಡೆಯಲು ಆರೋಗ್ಯ ಕ್ಷೇತ್ರದಲ್ಲಿ ಏರ್‌ ಏಷ್ಯಾಗೆ ಭಾರಿ ಬೇಡಿಕೆಯಿದೆ ಎಂದು ಭಾರತದ ಟೋನಿ ಫರ್ನಾಂಡಿಸ್ ಹೇಳಿದ್ದಾರೆ.

ತಿರುವನಂತಪುರಂ, ಕೋಲ್ಕತಾ,ಚೆನ್ನೈ, ಕೊಚ್ಚಿ, ತಿರುಚಿರಾಪಳ್ಳಿ ಮತ್ತು ಮುಂಬೈ ನಂತರ ಬೆಂಗಳೂರಿಗೆ ಏರ್‌ ಏಷ್ಯಾ ವೈಮಾನಿಕ ಸಂಸ್ಥೆ, ನೇರ ವಿಮಾನ ಸಂಚಾರವನ್ನು ವಿಸ್ತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ