ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಿಎಸ್‌ಎಂ:ಏಪ್ರಿಲ್‌ನಲ್ಲಿ 11ಮಿನ್ ನೂತನ ಗ್ರಾಹಕರ ಸೇರ್ಪಡೆ (GSM | Subscriber | COAI | Bharti Airtel | Vodafone Essar)
Bookmark and Share Feedback Print
 
ಜಿಎಸ್‌ಎಂ ಗ್ರಾಹಕರ ಸಂಖ್ಯೆ ಏಪ್ರಿಲ್ ತಿಂಗಳ ಅವಧಿಯಲ್ಲಿ 11.18 ಮಿಲಿಯನ್‌‌ಗಳಿಗೆ ತಲುಪಿದ್ದು, ದೇಶದ ಒಟ್ಟು ಗ್ರಾಹಕರ ಸಂಖ್ಯೆ 433 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮೊಬೈಲ್ ಆಪರೇಟರ್ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರ್ತಿ ಏರ್‌ಟೆಲ್ ಸಂಸ್ಥೆ ಜಿಎಸ್‌ಎಂ ಸಂಸ್ಥೆ, ಏಪ್ರಿಲ್ ತಿಂಗಳ ಅವಧಿಯಲ್ಲಿ ಮೂರು ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು, ಒಟ್ಟು 130.6 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿ ಅಗ್ರಸ್ಥಾನದಲ್ಲಿದೆ.

ಇಂಗ್ಲೆಂಡ್ ಮೂಲದ ವೋಡಾಫೋನ್ ಎಸ್ಸಾರ್, ಪ್ರಸಕ್ತ ತಿಂಗಳ ಅವಧಿಯಲ್ಲಿ 2.9 ಮಿಲಿಯನ್ ಗ್ರಾಹಕರನ್ನು ನೂತನವಾಗಿ ಸೇರ್ಪಡೆಗೊಳಿಸಿದೆ. ಇದರಿಂದಾಗಿ ಒಟ್ಟು 103.8 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದ್ದು ಎರಡನೇ ಸ್ಥಾನವನ್ನು ಪಡೆದಿದೆ.

ಭಾರ್ತಿ ಏರ್‌ಟೆಲ್ ಸಂಸ್ಥೆ, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.30.16ರಷ್ಟು ಪಾಲನ್ನು ಹೊಂದುವುದರೊಂದಿಗೆ ಅಗ್ರಸ್ಥಾನವನ್ನು ಪಡೆದಿದೆ.

ಮಾರ್ಚ್ ತಿಂಗಳ ಅವಧಿಯಲ್ಲಿ, ದೇಶಾದ್ಯಂತ ನೂತನ ಜಿಎಸ್‌ಎಂ ಗ್ರಾಹಕರ ಸಂಖ್ಯೆ 14 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಐಡಿಯಾ ಸೆಲ್ಯೂಲರ್ ಟೆಲಿಕಾಂ ಕಂಪೆನಿ, ಏಪ್ರಿಲ್ ತಿಂಗಳ ಅವಧಿಯಲ್ಲಿ 1.5 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು, ಒಟ್ಟು 95.3 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳು, ಏಪ್ರಿಲ್ ತಿಂಗಳ ಅವಧಿಯಲ್ಲಿ 1.25 ಮತ್ತು 33.217 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿವೆ. ಇದರಿಂದ ಬಿಎಸ್‌ಎನ್‌ಎಲ್ (64.7) ಮತ್ತು ಎಂಟಿಎನ್‌ಎಲ್(4.8 ಮಿಲಿಯನ್ ) ಒಟ್ಟು ಜಿಎಸ್‌ಎಂ ಗ್ರಾಹಕರನ್ನು ಹೊಂದಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ