ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಟಿ ಇಲಾಖೆಗೆ 30,ಸಾವಿರ ಹೆಚ್ಚುವರಿ ಸಿಬ್ಬಂದಿ ಅಗತ್ಯ:ಸರಕಾರ (Income Tax Department | Finance Ministry | Operations | Employees)
Bookmark and Share Feedback Print
 
ಆದಾಯ ತೆರಿಗೆ ಇಲಾಖೆ ಸುಗಮವಾಗಿ ಕಾರ್ಯನಿರ್ವಹಿಸುವಂತಾಗಲು ತಕ್ಷಣ 30,000 ಸಿಬ್ಬಂದಿಗಳ ನೇಮಕಾತಿ ಅಗತ್ಯವಾಗಿದೆ ಎಂದು ವಿತ್ತಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಾದ್ಯಂತ ಆದಾಯ ತೆರಿಗೆ ಸಂಗ್ರಹ ಹಾಗೂ ತೆರಿಗೆ ಪಾವತಿ ಸೇವೆಯನ್ನು ನೀಡಲು ಖಾಲಿಯಿರುವ 8 ಸಾವಿರ ಹುದ್ದೆಗಳ ಭರ್ತಿ ಸೇರಿದಂತೆ ತಕ್ಷಣ 22,000 ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಸರಕಾರದಿಂದ 58,000 ಹುದ್ದೆಗಳ ಭರ್ತಿಗೆ ಮಂಜೂರಾತಿ ದೊಪೆತಿದ್ದು, 8 ಸಾವಿರ ಹುದ್ದೆಗಳು ಖಾಲಿ ಉಳಿದಿವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ 4 ಸಾವಿರ ಅಧಿಕಾರಿಗಳು, 4 ಸಾವಿರ ಇನ್ಸ್‌ಪೆಕ್ಟರ್, 12,000 ತೆರಿಗೆ ಸಹಾಯಕರು ಮತ್ತು ಇತರ 2ಸಾವಿರ ಸಿಬ್ಬಂದಿಗಳ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಜೂನ್ 9, 10 ರಂದು ಮುಖ್ಯ ಆಯುಕ್ತರ ವಾರ್ಷಿಕ ಸಮ್ಮೇಳನ ನಡೆಯಲಿದ್ದು, ಹೆಚ್ಚುವರಿ ಸಿಬ್ಬಂದಿಗಳ ನೇಮಕಾತಿ ವಿಷಯ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ