ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈಜಿಪ್ತ್: ವೋಡಾಫೋನ್ ಶೇರುಗಳ ಮಾರಾಟಕ್ಕೆ ಚರ್ಚೆ (Vodafone | Egypt | Sell stake | Telecom provider)
Bookmark and Share Feedback Print
 
ಜಾಗತಿಕ ಖ್ಯಾತಿಯ ಟೆಲಿಕಾಂ ಸಂಸ್ಥೆ ವೋಡಾಫೋನ್,ಈಜಿಪ್ತ್‌ನಲ್ಲಿರುವ ಟೆಲಿಕಾಂ ಸಂಸ್ಥೆಗೆ 3ಬಿಲಿಯನ್ ಪೌಂಡ್‌ಗಳ ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈಜಿಪ್ತ್‌ನಲ್ಲಿರುವ ವೋಡಾಫೋನ್ ಕಂಪೆನಿಯಲ್ಲಿ, ಟೆಲಿಕಾಂ ಈಜಿಪ್ತ್ ಸಂಸ್ಥೆ ಈಗಾಗಲೇ ಶೇ.45ರಷ್ಟು ಪಾಲನ್ನು ಹೊಂದಿದೆ.ಇರ ಶೇರುಗಳನ್ನು ಖರೀದಿಸುವ ಬಗ್ಗೆ ವೋಡಾಫೋನ್‌ಗೆ ಸಂಪರ್ಕಿಸಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ವೋಡಾಫೋನ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಟ್ಟೊರಿಯೊ ಕೊಲಾವ್, ಈಜಿಪ್ತ್‌ನಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕಂಪೆನಿಗೆ ಚೇತರಿಕೆ ನೀಡಲು ಹಲವಾರು ಕಟಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಉಭಯ ಕಂಪೆನಿಗಳು ಶೇರುಗಳ ಮಾರಾಟ ಕುರಿತಂತೆ ಕಳೆದ ಒಂದು ತಿಂಗಳ ಹಿಂದೆ ಮಾತುಕತೆ ಆರಂಭವಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಬಂಧಿತ ಮಾಹಿತಿ ಹುಡುಕಿ