ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೇ 24ರಿಂದ ಬಿಡಬ್ಲೂಎ ಹರಾಜು ಆರಂಭ (3G spectrum|Broadband Wireless Access)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು,67,719 ಕೋಟಿ ರೂಪಾಯಿಗಳಿಗೆ ತಲುಪಿ ಅಂತ್ಯವಾಗಿದೆ.ಮೇ 24 ರಿಂದ ಬಿಡಬ್ಲೂಎ ತರಂಗಾಂತರಗಳ ಹರಾಜಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಟೆಲಿಕಾಂ ಮೂಲಗಳು ಹೇಳಿಕೆ ನೀಡಿವೆ.

ಅಧಿಕಾರಿಗಳ ಪ್ರಕಾರ, ಟೆಲಿಕಾಂ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ನೇತೃತ್ವದ ಸಮಿತಿ, 34 ದಿನಗಳ ಕಾಲ ನಡೆದು ಮೇ 19ಕ್ಕೆ ಅಂತ್ಯಗೊಂಡ 3ಜಿ ಹರಾಜಿಗೆ ಅನುಮತಿ ನೀಡಿದ್ದಾರೆ. ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಚಾವ್ಲಾ,ಟೆಲಿಕಾಂ ಕಾರ್ಯದರ್ಶಿ ಪಿ.ಜೆ ಥಾಮಸ್ ಮತ್ತು ಯೋಜನಾ ಆಯೋಗದ ಸದಸ್ಯೆ ಸುಧಾ ಪಿಳ್ಲೈ ಸಮಿತಿಯ ಸದಸ್ಯರಾಗಿದ್ದಾರೆ.

ಇದರಿಂದಾಗಿ 3ಜಿ ತರಂಗಾಂತರಗಳ ಹರಾಜು ಅಂತ್ಯಗೊಂಡಂತಾಗಿದ್ದು, ಬಿಡ್‌ನಲ್ಲಿ ಗೆಲುವು ಪಡೆದ ಟೆಲಿಕಾಂ ಕಂಪೆನಿಗಳು 10 ದಿನಗಳೊಳಗಾಗಿ ಹಣವನ್ನು ಪಾವತಿಸುವಂತೆ ಆದೇಶಿಸಲಾಗಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ