ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಿಂದೂಜಾ ಗ್ರೂಪ್‌ನಿಂದ ಲಕ್ಸಂಬರ್ಗ್ ಬ್ಯಾಂಕ್ ಖರೀದಿ (Hinduja| Luxembourg bank)
Bookmark and Share Feedback Print
 
ಜಾಗತಿಕ ಮಟ್ಟದ ಖ್ಯಾತ ಉದ್ಯಮ ಸಂಸ್ಥೆಯಾದ ಹಿಂದೂಜಾ ಗ್ರೂಪ್‌, ಲಕ್ಸಂಬರ್ಗ್‌ನ ಕೆಬಿಸಿ ಗ್ರೂಪ್‌ ಖಾಸಗಿ ಬ್ಯಾಂಕ್‌ನ್ನು 1.69 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿ ಖರೀದಿಸಿದೆ.

ಲಕ್ಸಂಬರ್ಗ್ ಮೂಲದ ಬ್ಯಾಂಕ್ ಖರೀದಿ ಪ್ರಕ್ರಿಯೆಯನ್ನು, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಅಂತ್ಯಗೊಳಿಸಲು ಹಿಂದೂಜಾ ಸಹೋದರರು ಯೋಜನೆಯನ್ನು ರೂಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಿಂದೂಜಾ ಮೂಲಗಳ ಪ್ರಕಾರ, ಕೆಬಿಎಲ್ ಸಂಸ್ಥೆಯ ಆಧೀನದಲ್ಲಿರುವ ಲಕ್ಸಂಬರ್ಗ್ ಬ್ಯಾಂಕ್, ಯುರೋಪ್‌ನ ಪ್ರಮುಖ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದು ಯುರೋಪ್‌ನ 10 ರಾಷ್ಟ್ರಗಳಲ್ಲಿ 55 ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿವೆ

ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಲಕ್ಸಂಬರ್ಗ್, ಮೊನಾಕೊ, ನೆದರ್‌ಲ್ಯಾಂಡ್, ಪೊಲೆಂಡ್, ಸ್ಪೇನ್ ಸ್ವಿಟ್ಜರ್‌ಲ್ಯಾಂಡ್ ಮತ್ತು ಇಂಗ್ಲೆಂಡ್ ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, 466 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಿಂದೂಜಾ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ