ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಾಕ್‌ನಿಂದ ಇದೀಗ ಬ್ಲಾಕ್‌ಬೆರ್ರಿ ಸೇವೆ ನಿಷೇಧ (Blackberry | Pakistan | Facebook)
Bookmark and Share Feedback Print
 
ಸಾಮಾಜಿಕ ನೆಟ್‌ವರ್ಕ ತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್ ನಿಷೇಧದ ನಂತರ ಇದೀಗ ಬ್ಲಾಕ್‌ ಬೆರ್ರಿ ಸೇವೆಗಳಿಗೆ ನಿಷೇಧ ಹೇರಿ ಪಾಕಿಸ್ತಾನ ಟೆಲಿಕಮ್ಯೂನಿಕೇಶನ್‌ ಅಥಾರಿಟಿ(ಪಿಟಿಎ)ಆದೇಶ ಹೊರಡಿಸಿದ್ದು, ಮುಂದಿನ ಸೂಚನೆ ನೀಡುವವರೆಗೆ ನಿಷೇಧ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.

ಡೈಲಿ ಟೈಮ್ಸ್ ಮೂಲಗಳ ಪ್ರಕಾರ, ದೇಶದ ಎಲ್ಲಾ ಮೊಬೈಲ್ ಆಪರೇಟರ್‌ ಕಂಪೆನಿಗಳು, ತಕ್ಷಣದಿಂದ ಜಾರಿಗೆ ಬರುವಂತೆ ಬ್ಲಾಕ್ ಬೆರ್ರಿ ಸೇವೆಗಳನ್ನು ತಡೆಹಿಡಿಯುವಂತೆ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಶುಕ್ರವಾರದಂದು ಫೇಸ್‌ಬುಕ್‌ಗೆ ನಿಷೇಧ ಹೇರಿದ ನಂತರ ಯೂ ಟ್ಯೂಬ್ ಹಾಗೂ ಸಾಮಾಜಿಕ ತಾಣವಾದ ಟ್ವಿಟ್ಟರ್‌ನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ದೇಶದ ನೂರಾರು ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದಾಗ, ಈ ಸೈಟ್‌ ನಿಷೇಧಿಸಲಾಗಿದೆ ಎಂದು ಕಂಪ್ಯೂಟರ್‌ ಡಿಸ್‌ಪ್ಲೇನಲ್ಲಿ ಕಂಡುಬರುತ್ತಿದೆ.

ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನ್ ಚಿತ್ರಾವಳಿ ಸ್ಪರ್ಧೆಯಲ್ಲಿ ಪಾಲ್ಗೊಂಡ 500 ಮಂದಿ ಸ್ಪರ್ಧಾಳುಗಳು, ಸರಕಾರ ಫೇಸ್‌ಬುಕ್‌ಗೆ ಹೇರಿದ ನಿಷೇಧದಿಂದಾಗಿ ಭಾರಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಬಂಧಿತ ಮಾಹಿತಿ ಹುಡುಕಿ