ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಬಿಡ್‌ದಾರರಿಗೆ ಎಸ್‌ಬಿಐಯಿಂದ ಸಾಲ:ಭಟ್ (SBI | 3G spectrum | Financing | Auctions)
Bookmark and Share Feedback Print
 
3ಜಿ ತರಂಗಾಂತರಗಳ ಹರಾಜಿನ ಬಿಡ್‌ನಲ್ಲಿ ಗೆಲುವು ಪಡೆದ ಟೆಲಿಕಾಂ ಕಂಪೆನಿಗಳಿಗೆ 20,000 ಕೋಟಿ ರೂಪಾಯಿಗಳವರೆಗೆ ಸಾಲದ ನೆರವು ನೀಡುವುದಾಗಿ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.

20,000 ಕೋಟಿ ರೂಪಾಯಿ ಸಾಲ ನೀಡುವುದರೊಂದಿಗೆ, ಬ್ಯಾಂಕ್‌ನಲ್ಲಿರುವ ಶೇ.50 ರಷ್ಟು ನಗದು ಹರಿವನ್ನು ಕಡಿತಗೊಳಿಸಿದಂತಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ಒ.ಪಿ.ಭಟ್ ತಿಳಿಸಿದ್ದಾರೆ.

ಎಸ್‌ಬಿಐ ಬ್ಯಾಂಕ್‌ನಲ್ಲಿ 40,000 ಕೋಟಿ ರೂಪಾಯಿ ನಗದು ಹರಿವಿನ ಪ್ರಮಾಣವಿದ್ದು, 20,000 ಕೋಟಿ ರೂಪಾಯಿಗಳನ್ನು ಟೆಲಿಕಾಂ ಕಂಪೆನಿಗಳಿಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.

ಆದರೆ, ಸಾಲಕ್ಕಾಗಿ ಸಂಪರ್ಕಿಸಿದ ಟೆಲಿಕಾಂ ಕಂಪೆನಿಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.3ಜಿ ತರಂಗಾಂತರಗಳ ಬಿಡ್‌ದಾರರಿಗೆ ಹಣ ಪಾವತಿಗಾಗಿ ಸರಕಾರ ಮೇ 31ರವರೆಗೆ ಅಂತಿಮ ಗಡುವನ್ನು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ