ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವ್ಯಾಟ್ ಹೆಚ್ಚಳ : ದೆಹಲಿಯಲ್ಲಿ ಪೆಟ್ರೋಲ್ ಪಂಪ್‌ಗಳು ಬಂದ್ (Delhi|VAT|petrol pumps|Diesel price)
Bookmark and Share Feedback Print
 
ಡೀಸೆಲ್‌ ಮೇಲಿನ ವ್ಯಾಟ್‌ ತೆರಿಗೆ ಹೆಚ್ಚಳ ವಿರೋಧಿಸಿ, ರಾಜಧಾನಿಯಲ್ಲಿ ಪೆಟ್ರೋಲ್ ಪಂಪ್‌ಗಳನ್ನು ಒಂದು ದಿನದ ಅವಧಿಗೆ ಬಂದ್ ಮಾಡಲಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ಡೀಸೆಲ್ ಮೇಲಿನ ವ್ಯಾಟ್ ತೆರಿಗೆ ಹೆಚ್ಚಳದಿಂದಾಗಿ,ಡೀಸೆಲ್ ಖರೀದಿಯಲ್ಲಿ ಶೇ.40ರಷ್ಟು ಕುಸಿತವಾಗಿದ್ದು, ವ್ಯಾಟ್ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವ್ಯಾಟ್ ತೆರಿಗೆ ಹೆಚ್ಚಳದಿಂದಾಗಿ ಡೀಸೆಲ್ ದರದಲ್ಲಿ ಕೂಡಾ ಹರಿಯಾಣಾ ರಾಜ್ಯಕ್ಕೆ ಹೋಲಿಸಿದಲ್ಲಿ, ಪ್ರತಿ ಲೀಟರ್‌ಗೆ ನಾಲ್ಕು ರೂಪಾಯಿ ಹೆಚ್ಚಳವಾಗಿದೆ.ಆದ್ದರಿಂದ ವಾಹನಗಳ ಮಾಲೀಕರು ರಾಜಧಾನಿಯ ನೆರೆಯಲ್ಲಿರುವ ಹರಿಯಾಣಾದ ನಗರಗಳಾದ ಗುರ್ಗಾಂವ್ ಮತ್ತು ಫರಿದಾಬಾದ್ ನಗರಗಳಲ್ಲಿ ಡೀಸೆಲ್‌ ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪೆಟ್ರೋಲ್ ಪಂಪ್ ಮಾಲೀಕರ ಒತ್ತಡದ ಮಧ್ಯೆಯು ದೆಹಲಿಯ ವಿತ್ತ ಸಚಿವ ಎ.ಕೆ ವಾಲಿಯಾ ಮಾತನಾಡಿ, 2009-10ರ ವ್ಯಾಟ್ ತೆರಿಗೆಗಳನ್ನು 2010-11ರ ಅವಧಿಯಲ್ಲಿ ಮುಂದುವರಿಸಲು ಸಾಧ್ಯವಾಗದು. ಆದ್ದರಿಂದ ವ್ಯಾಟ್ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿದೆ.ರಾಜಧಾನಿಯ ಗಡಿಭಾಗಗಳಲ್ಲಿರುವ ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಮಾರಾಟ ಕುಸಿತವಾಗಿದ್ದರೂ ಆದಾಯ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ