ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2.46 ಲಕ್ಷ ಕೋಟಿಗೆ ತಲುಪಿದ ಪರೋಕ್ಷ ತೆರಿಗೆ ಸಂಗ್ರಹ (Indirect taxes | Stimulus packages | Target | Direct taxes)
Bookmark and Share Feedback Print
 
ಉತ್ತೇಜನ ಪ್ಯಾಕೇಜ್‌ಗಳ ಮಧ್ಯೆಯು ಕೇಂದ್ರ ಸರಕಾರದ ಪರಿಷ್ಕ್ರತ ಗುರಿಗಿಂತ 2 ಸಾವಿರ ಕೋಟಿ ರೂಪಾಯಿ ಹೆಚ್ಚಳ ಪರೋಕ್ಷ ತೆರಿಗೆಯನ್ನು ಸಂಗ್ರಹಿಸಿ, 2.46 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಸರಕಾರದ ಮೂಲಗಳಉ ತಿಳಿಸಿವೆ.

ನೇರ ತೆರಿಗೆ ಸಂಗ್ರಹದಲ್ಲಿ 3.87 ಲಕ್ಷ ಕೋಟಿ ರೂಪಾಯಿಗಳ ಗುರಿಯನ್ನು ಹೊಂದಲಾಗಿತ್ತು.ಆದರೆ 3.80 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದು ಬೆಂಗಾಲ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಂದ್ರದ ಆದಾಯ ಕಾರ್ಯದರ್ಶಿ ಸುನೀಲ್ ಮಿತ್ರಾ ತಿಳಿಸಿದ್ದಾರೆ.

ಏತನ್ಮಧ್ಯೆ, ಬಹಿರಂಗವಾಗಿರುವ ಅಂಕಿ ಅಂಶಗಳು ತಾತ್ಕಾಲಿಕವಾಗಿದ್ದು, ಅಂತಿಮ ಹಾಗೂ ಪರಿಪೂರ್ಣ ಅಂಕಿ ಅಂಶಗಳನ್ನು ಕಂಟ್ರೋಲರ್ ಜನರಲ್ ಆಫ್ ಅಂಕೌಂಟ್ಸ್ ಇಲಾಖೆ ಬಿಡುಗಡಗೊಳಿಸುತ್ತದೆ.ಅಂತಿಮ ಹಂತದಲ್ಲಿ ನೇರ ತೆರಿಗೆ ಸಂಗ್ರಹದ ಅಂಕಿ ಅಂಶಗಳು ಹೆಚ್ಚಾಗಲಿವೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಸಂಗ್ರಹ 2.69 ಲಕ್ಷ ಕೋಟಿ ರೂಪಾಯಿಗಳಿಂದ 2.44 ಲಕ್ಷ ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲಾಗಿತ್ತು.ಆದರೆ ಕೇಂದ್ರ ಸರಕಾರದ ಪರಿಷ್ಕ್ರತ ಗುರಿಗಿಂತ 2 ಸಾವಿರ ಕೋಟಿ ರೂಪಾಯಿ ಹೆಚ್ಚಳ ಪರೋಕ್ಷ ತೆರಿಗೆಯನ್ನು ಸಂಗ್ರಹಿಸಿ, 2.46 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಸುನೀಲ್ ಮಿತ್ರಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ