ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಷಾರಾಮಿ ಕಾರು, ದ್ವಿಚಕ್ರವಾಹನಗಳ ರಸ್ತೆ ತೆರಿಗೆ ಹೆಚ್ಚಳ (Delhi hikes | Road tax for luxury cars | High-end bikes)
Bookmark and Share Feedback Print
 
ದೇಶದ ರಾಜಧಾನಿಯಲ್ಲಿ ಐಷಾರಾಮಿ ಕಾರುಗಳು ಹಾಗೂ ಬೈಕ್‌ಗಳನ್ನು ಹೊಂದಿರುವರು ಹೆಚ್ಚಿನ ತೆರಿಗೆಗಳನ್ನು ಭರಿಸಬೇಕಾಗುತ್ತದೆ. ದೆಹಲಿಯ ಸಚಿವ ಸಂಪುಟ ಹೆಚ್ಚುವರಿ ಆದಾಯ ಸಂಗ್ರಹವನ್ನು ಹೆಚ್ಚಿಸಲು ರಸ್ತೆ ತೆರಿಗೆಯಲ್ಲಿ ಏರಿಕೆ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದ ಸಚಿವ ಸಂಪುಟದ ಪರಿಷ್ಕ್ರತ ರಸ್ತೆ ತೆರಿಗೆ,25 ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರವಾಹನಗಳಿಗೆ ಶೇ.2ರಷ್ಟು ರಸ್ತೆ ತೆರಿಗೆಯನ್ನು ಭರಿಸಬೇಕಾಗುತ್ತದೆ. 25,000-40,000 ರೂಪಾಯಿಗಳ ಮೌಲ್ಯದ ದ್ವಿಚಕ್ರವಾಹನ ಹೊಂದಿರುವವರು ಶೇ.4ರಷ್ಟು ತೆರಿಗೆ ಹಾಗೂ 40,000 ರೂಪಾಯಿಗಳಿಗಿಂತ ಹೆಚ್ಚಿನಮೌಲ್ಯದ ದ್ವಿಚಕ್ರ ವಾಹನ ಹೊಂದಿರುವವರು ಶೇ.6ರಷ್ಟು ರಸ್ತೆ ತೆರಿಗೆಯನ್ನು ಭರಿಸಬೇಕಾಗುತ್ತದೆ.

6 ಲಕ್ಷ ಮೌಲ್ಯದ ಕಾರಿನ ರಸ್ತೆ ತೆರಿಗೆಯನ್ನು ದ್ವಿಗುಣಗೊಳಿಸಿ ಶೇ.4 ರಷ್ಟು ಏರಿಕೆ ಮಾಡಲಾಗಿದೆ.6ಲಕ್ಷದಿಂದ -10 ಲಕ್ಷ ರೂಪಾಯಿ ಮೌಲ್ಯದ ಕಾರಿಗೆ ಶೇ.7ರಷ್ಟು ರಸ್ತೆ ತೆರಿಗೆಯನ್ನು ವಿಧಿಸಲಾಗಿದೆ. 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಕಾರಿಗೆ ಶೇ.10ರಷ್ಟು ರಸ್ತೆ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ರಾಜ್ಯ ಸರಕಾರ ಅಧಿಸೂಚನೆಯನ್ನು ಹೊರಡಿಸಿದ ನಂತರ, ನೂತನ ತೆರಿಗೆ ದರ ಜಾರಿಗೆ ಬರಲಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ರಸ್ತೆ ತೆರಿಗೆ ಹೆಚ್ಚಳದಿಂದಾಗಿ ಐಷಾರಾಮಿ ಕಾರುಗಳ ಖರೀದಿಯನ್ನು ನಿಯಂತ್ರಿಸಿದಂತಾಗುವುದು ಹಾಗೂ ನಗರದಲ್ಲಿ ಖಾಸಗಿ ವಾಹನಗಳನ್ನು ಬಳಸುವುದಕ್ಕೆನಿರುತ್ಸಾಹಗೊಳಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿ ಪ್ರತಿನಿತ್ಯ 1 ಸಾವಿರ ವಾಹನಗಳನ್ನು ನೋಂದಣಿ ಮಾಡಲಾಗುತ್ತಿದೆ. ದೆಹಲಿಯಲ್ಲಿ 12 ಲಕ್ಷ ಜನಸಂಖ್ಯೆಯಿದ್ದು, ಸುಮಾರು 60 ಲಕ್ಷ ವಾಹನಗಳಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಸಚಿವ ಸಂಪುಟ, ಹೆಚ್ಚುವರಿ ಆದಾಯವನ್ನು ಸಂಗ್ರಹಿಸಲು ನೋಂದಣಿ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವನೆಗೆ ಸರಕಾರ ಸಮ್ಮತಿ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ