ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಡಬ್ಲೂಎ: ಆರಂಭದ ದಿನದಂದು 6940 ಕೋಟಿ ರೂ. ಬಿಡ್ (3G auction | BWA| Bid | BSNL | MTNL)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು ಯಶಸ್ವಿನಿಂದ ಉತ್ತೇಜಿತವಾದ ಟೆಲಿಕಾಂ ಇಲಾಖೆ, ಬಿಬ್ಲೂಎ ತರಂಗಾಂತರಗಳ ಹರಾಜನ್ನು ಸೋಮವಾರದಿಂದ ಆರಂಭಿಸಿದ್ದು, ಮೂಲದರವನ್ನು 1750 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಿದೆ.ಆರಂಭದ ದಿನದಂದು ಹರಾಜಿನ ಮೊತ್ತ 2,353 ಕೋಟಿ ರೂಪಾಯಿಗಳಿಗೆ ತಲುಪಿದೆ.

20 ಮೆಗಾ ಹರ್ಟ್ಜ್‌ನ ಬಿಡಬ್ಲೂಎ ತರಂಗಾಂತರಗಳನ್ನು ಕೇಂದ್ರ ಸರಕಾರ ಎರಡು ಹಂತಗಳಲ್ಲಿ ಹರಾಜು ಮಾಡುತ್ತಿದ್ದು,ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ. ಆದರೆ ಅಂತಿಮ ಹಂತದಲ್ಲಿ ನಿಗದಿಪಡಿಸಲಾದ ಹರಾಜಿನ ಮೊತ್ತವನ್ನು ಪಾವತಿಸಲಿವೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡ್ಬೂಎ 3ವಲಯಗಳ ತರಂಗಾಂತರಗಳ ಒಟ್ಟು ಆದಾಯ ಆರಂಭದ ದಿನದಂದು 6,940 ಕೋಟಿ ರೂಪಾಯಿಗಳಿಗೆ ತಲುಪಿದೆ.

3ಜಿ ತರಂಗಾಂತರಗಳ ಹರಾಜಿನಂತೆ ಬಿಡಬ್ಲೂಎ ತರಂಗಾಂತರಗಳ ಹರಾಜಿನ ಸ್ಪರ್ಧೆ ಭಾರಿ ಬಿರುಸಿನಿಂದ ಚೇತರಿಕೆ ಕಾಣಲಿವೆ.ಬಿಡಬ್ಲೂಎ ಹರಾಜಿನ ಮೊತ್ತ 15,000 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಗಳಿವೆ ಎಂದು ಕೇಂದ್ರದ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.

ಬಿಡಬ್ಲಎ ತರಂಗಾಂತರಗಳನ್ನು ಕಂಪೆನಿಗಳು ಪಡೆಯುವುದರಿಂದ ಹೈ-ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಹಾಗೂ ಇಂಟರ್‌ನೆಟ್ ಟೆಲಿಫೋನಿ ಮತ್ತು ಟೆಲಿವಿಜನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವೈಸ್ ಮತ್ತು ಹೈ- ಸ್ಪೀಡ್ ಡಟಾ ಸೇವೆಗಳನ್ನು ಪಡೆಯಬಹುದಾಗಿದೆ.

ಬಿಡಬ್ಲೂಎ ತರಂಗಾಂತರಗಳ ಹರಾಜಿನಲ್ಲಿ 11ಟೆಲಿಕಾಂ ಕಂಪೆನಿಗಳು ಭಾಗವಹಿಸಿದ್ದು,ಭಾರ್ತಿ ಏರ್‌ಟೆಲ್, ರಿಲಯನ್ಸ್, ಐಡಿಯಾ ಸೆಲ್ಯೂಲರ್, ಏರ್‌ಸೆಲ್, ವೋಡಾಫೋನ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಹೊರತುಪಡಿಸಿ, ನೂತನ ಟೆಲಿಕಾಂ ಕಂಪೆನಿಗಳಾದ ಆಗುರೆ, ಟಿಕೋನಾ ವೈರ್‌ಲೆಸ್, ಇನ್ಫೋಟೆಲ್ ಬ್ರಾಡ್‌ಬ್ಯಾಂಡ್‌ ಸರ್ವಿಸಸ್ ಮತ್ತು ಕ್ವುವಲ್‌ಕಾಮ್ ಮತ್ತು ಸ್ಪೈಸ್ ಕಂಪೆನಿಗಳು ಬಿಡ್‌ನಲ್ಲಿ ಪಾಲ್ಗೊಂಡಿವೆ.

ದೆಹಲಿ, ಮುಂಬೈ,ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ತಲಾ 232.96 ಕೋಟಿ ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ